ಬ್ರಿಟನ್ನಲ್ಲಿ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಂತೆ ದೊಡ್ಡ ಘೋಷಣೆ ಮಾಡಿದ್ದಾರೆ. ಬ್ರಿಟನ್ನಲ್ಲಿ ಪ್ರತಿ ಮನೆಯ ವಿದ್ಯುತ್ಬಿಲ್ಗಳಲ್ಲಿ ಸುಮಾರು 244 ಪೌಂಡ್ನಷ್ಟು ಕಡಿತ ಮಾಡುವುದಾಗಿ ಭರವಸೆ ನೀಡಿದ್ದಾರೆ. ಭಾರತದಲ್ಲಿ ಆಮ್ಆದ್ಮಿ ಸರ್ಕಾರ, ದೆಹಲಿ ಹಾಗೂ ಪಂಜಾಬ್ರಾಜ್ಯಗಳಲ್ಲಿ 200 ಯುನಿಟ್ವಿದ್ಯುತ್ಅನ್ನು ಉಚಿತವಾಗಿ ನೀಡುತ್ತಿದೆ. ರಿಷಿ ಸುನಕ್ಅವರ ಈ ಘೋಷಣೆ ಬ್ರಿಟನ್ಚುನಾವಣೆಯಲ್ಲಿ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ.