ರಾಜಸ್ಥಾನ ಭವನ ನಿರ್ಮಾಣಕ್ಕೆ ಜಾಗ ಕೋರಿ ಕರ್ನಾಟಕ ಮುಖ್ಯಮಂತ್ರಿ ಸೇರಿದಂತೆ 3 ರಾಜ್ಯಗಳ ಮುಖ್ಯಮಂತ್ರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ಗೆಹ್ಲೋಟ್‌ಬುಧವಾರ ಪತ್ರ ಬರೆದಿದ್ದಾರೆ.ರಾಜ್ಯದ ರಾಜಧಾನಿಗಳಲ್ಲಿ 32300 ಚದರ ಅಡಿ ಜಾಗ ನೀಡುವಂತೆ ಅವರು ಮನವಿ ಮಾಡಿದ್ದಾರೆ. ದೇಶದ ಐಟಿ ಹಬ್‌ಆಗಿರುವ ಬೆಂಗಳೂರಿನಲ್ಲಿ ರಾಜಸ್ಥಾನ ಭವನ ನಿರ್ಮಾಣ ಮಾಡಲು ಅವಕಾಶ ನೀಡುವುದನ್ನು ನಾವು ಸ್ವಾಗತಿಸುತ್ತೇವೆ. ಇದರಿಂದಾಗಿ ಉಭಯ ರಾಜ್ಯಗಳ ಸಂಸ್ಕೃತಿ ಹಂಚಿಕೊಳ್ಳಲು ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಇದರಿಂದ ಅನುಕೂಲವಾಗಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಗೆಹ್ಲೋಟ್‌ಹೇಳಿದ್ದಾರೆ.