ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೋಲುವ ಕ್ಯೂಆರ್ ಕೋಡ್ನ ಚಿತ್ರ ಮತ್ತು ಮೇಲೆ ಬರೆಯಲಾದ ‘ಪೇ ಸಿಎಂ’ ಎಂಬ ಪೋಸ್ಟರ್ಗಳನ್ನು ಬುಧವಾರ ಬೆಂಗಳೂರಿನೆಲ್ಲೆಡೆ ಅಂಟಿಸಲಾಗಿದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ಪೊಲೀಸರ ವಿರುದ್ಧ ಗರಂ ಆಗಿದ್ದಾರೆ. ಗರಂ ಆದ ಬೆನ್ನಲ್ಲೇ ಪೊಲೀಸರು ಪೋಸ್ಟರ್ಗಳನ್ನು ತೆರವು ಮಾಡಿದ್ದಾರೆ. ಸದ್ಯಕ್ಕೆ ಒಂದು ಎಫ್ಐಆರ್ ಮಾತ್ರ ಆಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ಆಯುಕ್ತ ಪ್ರತಾಪ್ರೆಡ್ಡಿ ಹೇಳಿದ್ದಾರೆ.