ನನಗೆ ಕುಸ್ತಿನೇ ಬೇಕು, ಯಾರು ಬರ್ತೀರಿ ಬನ್ರಿ: ಸ್ವಕ್ಷೇತ್ರ ಶಿಗ್ಗಾಂವಿ ನೆಲದಲ್ಲಿ ನಿಂತು ಎದುರಾಳಿಗಳಿಗೆ ಸಿಎಂ ಬೊಮ್ಮಾಯಿ ಪಂಥಾಹ್ವಾನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಸಭೆ ಹಾಗೂ ಕಾಂಗ್ರೆಸ್‌ತೊರೆದು ಬಿಜೆಪಿ ಸೇರ್ಪಡೆಯಾಗುವವರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕುಸ್ತಿ ಪಟ್ಟುಗಳು ನಿಮ್ದು ಏನಿದೆ ಸ್ವಲ್ಪ ತಾಲೀಮು ಮಾಡಿಕೊಂಡು ಬರ್ರಿ, ಯಾರ ಕಣಕ್ಕೆ ಬರ್ತೀರಿ ಬರ್ರಿ. ಯಾರ ಬೇಕಾದರೂ ಕಣಕ್ಕೆ ಬರ್ರಿ, ಸೆಡ್ಡು ಹೊಡಿತೀವಿ… ಹೀಗೆ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ಸ್ವಕ್ಷೇತ್ರ ಶಿಗ್ಗಾಂವಿ ನೆಲದಲ್ಲಿ ನಿಂತು ಎದುರಾಳಿಗಳಿಗೆ ಪಂಥಾಹ್ವಾನ ನೀಡಿದರು ಶಿಗ್ಗಾಂವಿ ಕ್ಷೇತ್ರದಲ್ಲಿ ಎಸ್‌. ನಿಜಲಿಂಗಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಇತಿಹಾಸವಿದೆ. ಆದರೆ, ನನಗೆ ಅವಿರೋಧ ಆಯ್ಕೆ ಬೇಡ. ಕುಸ್ತಿನೇ ಬೇಕು. ಅಂದಾಗಲೇ ಯಾರ ಶಕ್ತಿ ಎಷ್ಟಿದೆ ಎನ್ನುವುದು ತಿಳಿಯಲಿದೆ. ನಿಮಗೆ ಗೊತ್ತಾಗಲ್ಲ, ನಾವು ಎಲ್ಲದಕ್ಕೂ ತಯಾರಿದ್ದೇವೆ. ಜನ ಶಕ್ತಿಯೇ ನನ್ನ ಶಕ್ತಿ, ಜನರ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸದಾಕಾಲ ಜನರ ಮಧ್ಯ ಇರುವುದರಿಂದ ನನಗೆ ಯಾವುದೂ ವ್ಯತ್ಯಾಸ ಆಗುತ್ತಿಲ್ಲ ಎಂದರು. ಕೆಲವರು ಬೆಂಗಳೂರು, ದಿಲ್ಲಿಯಲ್ಲಿ ಕುಳಿತು ಬೊಮ್ಮಾಯಿ ಹೇಗೆ ಸೋಲಿಸಬೇಕು ಎಂಬ ಪ್ಲ್ಯಾನ್‌ಮಾಡುತ್ತಿದ್ದಾರೆ. ಆದರೆ, ನಾನು ಅದಾವುದಕ್ಕೂ ತಲೆ ಕಡೆಸಿಕೊಂಡಿಲ್ಲ. ಅದಕ್ಕೆ ಸಮಯವನ್ನೂ ಹಾಳು ಮಾಡಿಲ್ಲ. ನನಗೆ ನನ್ನ ಜನರು, ತಾಯಂದಿರು, ಯುವಕರು, ರೈತರ ಮೇಲೆ ವಿಶ್ವಾಸವಿದೆ.

Leave a Reply

Your email address will not be published. Required fields are marked *