ಮೈಸೂರಿನಲ್ಲಿ ಸರ್ಕಾರದ ಫಲಾನುಭಾವಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಮ್ಮ ಸರ್ಕಾರ ವಿಧಾನಸೌಧ ದಲ್ಲಿ ಇಲ್ಲ. ನಮ್ಮ ಸರ್ಕಾರ ನಿಮ್ಮ ಮನೆಗಳಲ್ಲಿ ಇದೆ. ನಿಮ್ಮ ಬಳಿಗೆ ಬಂದು ಸರ್ಕಾರ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಬಡವರ ಪರ ಮಿಡಿಯುವ ಹೃದಯದ ನಾಯಕ. ಬಡವರ ಪರವಾಗಿ ಯಡಿಯೂರಪ್ಪ ಅವರು ಹತ್ತು ಹಲವು ಯೋಜನೆ ಜಾರಿಗೆ ತಂದರು. ನಾವು ಮಾಡಿರುವ ಒಳ್ಳೆಯ ಕೆಲಸಕ್ಕೆ ಜನರ ಬೆಂಬಲ ಬೇಕು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ನನಗೆ ಬಡವರ ಕಷ್ಟ ಗೊತ್ತಿದೆ. ಬಡವರ ಕಲ್ಯಾಣಕ್ಕಾಗಿ ನಾನು ದುಡಿಯುತ್ತಿದ್ದೇನೆ ಎಂದರು.