ಪಾಕಿಸ್ತಾನದ ಪಂಜಾಬ್‌ನ ವಜೀರಾಬಾದ್‌ನಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ಖಾನ್‌ಮೇಲೆ ಕಳೆದ ವಾರ ಗುಂಡಿನ ದಾಳಿ ನಡೆದಿತ್ತು. ಪ್ರಾಣಾಪಾಯದಿಂದ ಪಾರಾಗಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನ ದಾಳಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಇಮ್ರಾನ್‌ಖಾನ್, ‘ವೈದ್ಯರು ನನ್ನ ಬಲಗಾಲಿನಿಂದ ಮೂರು ಗುಂಡುಗಳನ್ನು ಹೊರತೆಗೆದಿದ್ದಾರೆ. ಎಡಭಾಗದಲ್ಲಿ ಕೆಲವು ಚೂರುಗಳನ್ನು ಬಿಟ್ಟಿದ್ದಾರೆ’. ‘ನನ್ನ ಹತ್ಯೆಯ ಸಂಚನ್ನು ಎರಡು ತಿಂಗಳ ಹಿಂದೆಯೇ ರೂಪಿಸಲಾಗಿತ್ತು’ ಎಂಬ ಆರೋಪವನ್ನು ಇಮ್ರಾನ್‌ಖಾನ್‌ಮಾಡಿದ್ದಾರೆ. ಈ ಕುರಿತು ನಿಮಗೆ ಹೇಗೆ ಮಾಹಿತಿ ದೊರೆತಿದೆ ಎಂದು ಇಮ್ರಾನ್‌ಅವರನ್ನು ಸಿಎನ್ಎನ್‌ಪ್ರಶ್ನಿಸಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ನೆನಪಿಡಿ, ನಾನು ಮೂರೂವರೆ ವರ್ಷ ಪ್ರಧಾನಿಯಾಗಿ ಅಧಿಕಾರದಲ್ಲಿದ್ದೆ. ನನಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು, ವಿವಿಧ ಏಜೆನ್ಸಿಗಳೊಂದಿಗೆ ಸಂಪರ್ಕವಿದೆ’ ಎಂದು ಹೇಳಿದ್ದಾರೆ.