ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದ ಇಟಾನಗರದ ಹೊಳ್ಳಂಗಿಯಲ್ಲಿ ಶನಿವಾರ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಉದ್ಘಾಟನೆ. ಮಾಡಿದ ಬಳಿಕ ಆಯೋಜಿಸದ ಸಭೆಯನ್ನುದ್ದೇಶಿ ಮಾತನಾಡಿದರು. ಈ ಹಿಂದಿನ ಸರ್ಕಾರ ಮೀನಾಮೇಷ ಎಣಿಸಿ ಯೋಜನೆಗೆ ಶಿಲನ್ಯಾಸ ಮಾಡುತ್ತಿತ್ತು.ಶಿಲನ್ಯಾಸ ನಾವು ಮಾಡ್ತೇವೆ, ಉದ್ಘಾಟನೆಯನ್ನು ನಾವೇ ಮಾಡುತ್ತೇವೆ. ನಮ್ಮ ಯೋಜನೆಗಳ ಅನುಷ್ಠಾನದಲ್ಲಿ ಅಡೆ ತಡೆ ಇಲ್ಲ. ತ್ವರಿತಗತಿಯಲ್ಲಿ ಕೆಲಸವನ್ನು ಮಾಡಿ ಪೂರ್ಣಗೊಳಿಸುತ್ತೇವೆ. ನಾವೇ ಉದ್ಘಾಟನೆ ಮಾಡಿ ಜನರಿಗೆ ಮುಕ್ತ ಮಾಡುತ್ತೇವೆ ಇದು ನಮ್ಮ ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ತೋರುತ್ತಿರುವ ಶ್ರದ್ಧೆ ನನ್ನ ದೇಶ ಅತೀ ವೇಗದಲ್ಲಿ ಅಭಿವೃದ್ಧಿಯಾಗಬೇಕು ಅನ್ನೋ ಕನಸಿನೊಂದಿಗೆ ನಿರಂತರ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.