ನನ್ನ ನಂಬಿ ಕೂರಬೇಡಿ ಮೋದಿ ವಾರ್ನ್: ರಾಜ್ಯ ಬಿಜೆಪಿ ನಾಯಕರಿಗೆ ಬಿಗ್ ಶಾಕ್

2024ರ ಚುನಾವಣೆಗೆ ಇನ್ನೂ 400 ದಿನ ಬಾಕಿ ಇದೆ. ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದಲ್ಲೇ ಪ್ರಧಾನಿ ನರೇಂದ್ರ ಮೋದಿ ಕಹಳೆ ಊದಿದ್ದಾರೆ. ಮೋದಿಯಿಂದ ಎಚ್ಚರಿಕೆಯ ಖಡಕ್ ಸಂದೇಶ ರವಾನೆಯಾಗಿದೆ, ಮೋದಿ ಭ್ರಮೆ ಬೇಡ, ಮೋದಿ ಹೆಸರೇಳಿಕೊಂಡು ಕೂರಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅತಿಯಾದ ಆತ್ಮವಿಶ್ವಾಸ ಬೇಡ, ಮೊದಲು ಮತದಾರರ ಮನ ಗೆಲ್ಲಿ ಎಂದು ಮೋದಿಯಿಂದ ಸಲಹೆ ಕೊಟ್ಟಿದ್ದು ಕರ್ನಾಟಕವೇ ಮೊದಲ ಟಾರ್ಗೆಟ್ ಎಂಬ ಚರ್ಚೆ ಆಗುತ್ತಿದೆ. ಮೋದಿಯ ಮೇಲೆ ಅತಿಯಾದ ಅವಲಂಬನೆ ಆಗಿ ರಾಜ್ಯದ ನಾಯಕರ ಶ್ರಮ ಕಡಿಮೆ ಆಗಿದೆಯಾ?. ಹಾಗಾದ್ರೆ ಬಿಜೆಪಿ ಹೈಕಮಾಂಡ್‌ಗೆ ತಲುಪಿದ ಆ ವರದಿಯಿಂದಲೇ ಮೋದಿ ಮಹಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಮೋದಿ ಹೆಚ್ಚು ನಂಬಿ ಸಂಘಟನೆಯಲ್ಲಿ ವೀಕ್ ಆಗುತ್ತೆ ಎಂಬ ಆತಂಕ ಬಿಜೆಪಿ ಹೈಕಮಾಂಡ್‌ಗೆ ಇದೆ, ಆ ಕಾರಣದಿಂದಲೇ ಮಿಷನ್ 2024 ಟಾರ್ಗೆಟ್ ಮಿಸ್ ಆದ್ರೆ ಕಷ್ಟ ಎಂದು ಮೋದಿ ವಾರ್ನ್ ಮಾಡಿದ್ದಾ? ಎಂಬ ಚರ್ಚೆಗೆ ವೇದಿಕೆ ಆಗಿರೋದಂತೂ ಸತ್ಯ ಅಂದಹಾಗೆ ಕರ್ನಾಟಕ ಸೇರಿದಂತೆ ಮುಂಬರುವ ಚುನಾವಣೆಗಳ ತಂತ್ರಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸುವ ಸುಳಿವು ಎನ್ನಲಾಗಿದೆ.

Leave a Reply

Your email address will not be published. Required fields are marked *