ಹೆಂಡತಿ ಗಂಡನನ್ನು ಹೇಗೆ ಬದಲಾಯಿಸುತ್ತಾಳೆ ನೋಡಿ, ನನ್ನ ಪತಿಯನ್ನು ನಾನು ಉದ್ಯಮಿಯನ್ನಾಗಿ ಮಾಡಿದ್ದೇನೆ. ನನ್ನ ಮಗಳು ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ. ನಮ್ಮ ಮನೆಯಲ್ಲಿ ಯಾವ ಕಾರ್ಯ ನಡೆಯುವುದಾದರೂ ಗುರುವಾರ ನಡೆಯುತ್ತದೆ. ಇನ್ಫೋಸಿಸ್ ಆರಂಭ ಮಾಡಿದ್ದು ಅದೇ ವಾರ. ನನ್ನ ಮಗಳ ಮದುವೆಯಾದ ಮೇಲೆ ಸುನಕ್ ಯಾಕೆ ನಿಮ್ಮ ಮನೆಯಲ್ಲಿ ಎಲ್ಲಾ ಕಾರ್ಯಗಳು ಗುರುವಾರ ನಡೆಯುತ್ತವೆ ಎಂದು ಕೇಳಿದ್ದರು. ಈಗ ಸುನಕ್ ಗುರುವಾರ ಉಪವಾಸ ಆಚರಿಸುತ್ತಾರೆ. ಇದು ಹೆಂಡತಿಯ ಮಹಿಮೆ, ಆದರೆ ನನ್ನ ಪತಿಯಲ್ಲಿ ಇಂತಹ ಬದಲಾವಣೆ ತರಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ. 150 ವರ್ಷಗಳಿಂದ ಇಂಗ್ಲೆಂಡ್‍ನಲ್ಲಿರುವ ಅಳಿಯನ ಕುಟುಂಬ ಈಗಲೂ ಭಾರತದ ಮೌಲ್ಯಗಳಿಗೆ ತೆರೆದುಕೊಂಡಿದೆ. ಅಳಿಯನ ತಾಯಿ ಈಗಲೂ ಸೋಮವಾರ ಉಪವಾಸ ಆಚರಿಸುತ್ತಾರೆ. ರಿಷಿ ಸುನಕ್ 2009ರಲ್ಲಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದು, 2022ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇಂಗ್ಲೆಂಡ್‍ನ ಆಧುನಿಕ ಇತಿಹಾಸದಲ್ಲಿ ಅವರು 42ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. ಪ್ರಧಾನಿಯಾಗುವ ಮೊದಲು ಏಳು ವರ್ಷ ಸಂಸದರಾಗಿ ರಿಷಿ ಸುನಾಕ್ ಕೆಲಸ ಮಾಡಿದ್ದರು. ಎಂದು ಸುಧಾ ಮೂರ್ತಿ ಹೇಳಿಕೊಂಡಿದ್ದಾರೆ.