ನನ್ನ ಮಕ್ಕಳಿಗೆ ಊಟ ಹಾಕಬೇಕೋ ಅಥವಾ ಅವರನ್ನು ಕೊಲ್ಲಬೇಕೋ?- ಬೆಲೆ ಏರಿಕೆ ಖಂಡಿಸಿ ಕರಾಚಿ ಮಹಿಳೆ ಪಾಕ್ ಪ್ರಧಾನಿಗೆ ಕ್ಲಾಸ್

ಹೆಚ್ಚುತ್ತಿರುವ ಹಣದುಬ್ಬರ ಬಗ್ಗೆ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಿಎಂಎಲ್-ಎನ್ ನಾಯಕಿ ಮರ್ಯಮ್ ನವಾಜ್ ವಿರುದ್ಧ ಕರಾಚಿ ಮಹಿಳೆ ರಾಬಿಯಾ ಅವರು, ಮನೆ ಬಾಡಿಗೆ ಕಟ್ಟಬೇಕೋ, ದುಬಾರಿ ವಿದ್ಯುತ್ ಬಿಲ್‍ಗಳನ್ನು ಪಾವತಿಸಬೇಕೋ, ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸಬೇಕೋ, ನನ್ನ ಮಕ್ಕಳಿಗೆ ಊಟ ಹಾಕಬೇಕೋ ಅಥವಾ ಅವರನ್ನು ಕೊಲ್ಲಬೇಕೋ? ಎಂದು ಪ್ರಶ್ನಿಸುತ್ತಾ ಕಣ್ಣೀರು ಹಾಕಿದ್ದಾರೆ. ನನ್ನ ಮಕ್ಕಳಲ್ಲಿ ಒಬ್ಬರಿಗೆ ಫಿಟ್ಸ್ ಇದೆ. ಆದರೆ ನಾಲ್ಕು ತಿಂಗಳಿನಿಂದ ಅವರಿಗೆ ನೀಡಲಾಗುತ್ತಿರುವ ಔಷಧಿ ಬೆಲೆ ಏರಿಕೆಯಾಗಿದೆ. ಹಾಗಂತ ನನ್ನ ಮಕ್ಕಳಿಗೆ ಔಷಧಿ ನೀಡದೇ ಇರುವುದಕ್ಕೆ ಆಗುತ್ತಾ? ಸರ್ಕಾರ ಈಗಾಗಲೇ ಬಹುತೇಕ ಬಡವರನ್ನು ಕೊಂದಿದೆ. ಸರ್ವಶಕ್ತನಾದ ಅಲ್ಲಾಹನಿಗೆ ಈ ಬಗ್ಗೆ ಪ್ರಶ್ನಿಸಲು ನೀವು ಭಯಪಡುತ್ತೀರೋ ಅಥವಾ ಇಲ್ಲವೋ ಎಂದು ಆಕ್ರೋಶ ಹೊರಹಾಕಿದ್ದಾರೆ. ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಈ ವೀಡಿಯೋಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರ ಜೂನ್‍ನಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಿಲ್ಲ ಅಥವಾ ಔಷಧಿಗಳ ಮೇಲೆ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *