ಇತ್ತೀಚೆಗೆ ಅಮೆರಿಕದ ಬರಹಗಾರ್ತಿಯೊಬ್ಬರು 30 ವರ್ಷಗಳ ಹಿಂದೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪ ಹೊರಿಸಿದ್ದರು. ಈ ಆರೋಪ ಬುಧವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ, ಟ್ರಂಪ್ 1990ರ ದಶಕದಲ್ಲಿ ಡಿಪಾರ್ಟ್ಮೆಂಟ್ ಸ್ಟೋರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಬರಹಗಾರ್ತಿ ಇ ಜಿನ್ ಕ್ಯಾರೋಲ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಒಂದು ಕಟ್ಟು ಕಥೆ. ಆ ಮಹಿಳೆಯ ಪರಿಚಯ ನನಗಿಲ್ಲ. ನಾನು ಆಕೆಯನ್ನು ಎಂದಿಗೂ ಭೇಟಿಯಾಗಿಲ್ಲ. ಆಕೆ ಯಾರೆಂಬುದೇ ನನಗೆ ತಿಳಿದಿಲ್ಲ.ನಾನು ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಅಂತಹ ಕೃತ್ಯ ನಾನು ಎಂದಿಗೂ ಮಾಡಿಲ್ಲ. ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.