ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ದೆಹಲಿಗೆ ಹೋಗುತ್ತಿದ್ದೇನೆ. ಗಡಿ ವಿಚಾರದ ಬಗ್ಗೆ ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. ಗಡಿ ವಿಚಾರದ ಸಭೆ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ಮಾಡ್ತೇನೆ. ನಾನು ಎಲ್ಲ ಸಿದ್ಧತೆಗಳ ಜೊತೆ ಹೋಗುತ್ತಿದ್ದೇನೆ. ನಮಗೆ ನಮ್ಮ ನೆಲ-ಜಲ-ಗಡಿ ವಿಚಾರ ಮುಖ್ಯ. ಅವಕಾಶ ಸಿಕ್ಕಿದರೆ ಸಂಪುಟ ಬಗ್ಗೆ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.