ಬೆಳಗಾವಿಯ ಸಾಂಬ್ರಾ ಏರ್ ಪೋರ್ಟ್‍ನಲ್ಲಿ ಸಿಎಂ ಮಾತನಾಡುತ್ತಿದ್ದಾಗ ನಿಮ್ಮ ಸಚಿವರು ಮಾತನಾಡಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಹೇಳಿದರು. ಈ ವೇಳೆ ಸಿಎಂ ಅದೇ ರೀ ಅವರಿಗೆ ಹೇಳಿದೀನಿ ಎಂದು ಪುನರುಚ್ಚರಿಸಿದರು. ಅವರು ವಿಧಾನಸಭೆಯಲ್ಲಿ ಅಗ್ರೆಸ್ಸಿವ್ ಆಗಿ ಮಾಡ್ತಿದ್ದಾರೆ. ಅದನ್ನ ಬಹಿರಂಗವಾಗಿ ಅವರು ಸ್ಟಾರ್ಟ್ ಮಾಡಲಿ. ಈಗಾಗಲೇ ಬಹಳಷ್ಟು ಜನ ಸಚಿವರು ಸ್ಟಾರ್ಟ್ ಮಾಡಿದ್ದಾರೆ. ಪ್ರಶ್ನೆ ಅದಲ್ಲ ಸುಳ್ಳನ್ನು ಹೇಳುವ ಕಾಂಗ್ರೆಸ್ ಕೀಳುಮಟ್ಟದ ಮಾತುಗಳನ್ನಾಡುತ್ತದೆ. ಆ ಕೀಳುಮಟ್ಟಕ್ಕೆ ಇಳಿಯುವಂತದ್ದು ರಾಜ್ಯದ ಸಂಸ್ಕೃತಿ ಅಲ್ಲ ಎಂದು ಸಿಎಂ ಹೇಳಿದರು.