ʼನೋ ಮನಿ ಫಾರ್‌ಟೆರರಿಸಂʼ ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತು ಸಚಿವರ ಸಮಾವೇಶ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿದರು. ನಮ್ಮ ನಾಗರಿಕರು ಸುರಕ್ಷಿತವಾಗಿರಲು ನಾವು ಬಯಸಿದರೆ, ನಮ್ಮ ಮನೆಗಳಿಗೆ ಭಯೋತ್ಪಾದನೆ ಬರುವವರೆಗೆ ಕಾಯಲು ಸಾಧ್ಯವಿಲ್ಲ. ನಾವು ಭಯೋತ್ಪಾದಕರನ್ನು ಹಿಂಬಾಲಿಸಬೇಕು. ಅವರ ಹಣಕಾಸು ಮೂಲಗಳನ್ನು ನಾಶ ಮಾಡಬೇಕು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವವರೆಗೂ ಭಾರತ ವಿಶ್ರಮಿಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.