ರಷ್ಯಾ ಅಧ್ಯಕ್ಷ ರಷ್ಯಾ, ಉಕ್ರೇನ್ ನಡುವಿನ ಯುದ್ಧ ಸೇರಿದಂತೆ ತಮ್ಮ ದೇಶದ ವಿಚಾರಕ್ಕಿಂತ ಹೆಚ್ಚಾಗಿ ಭಾರತ ಹಾಗೂ ಪ್ರಧಾನಿ ಮೋದಿ ಕುರಿತು ಹೇಳಿದ್ದಾರೆ.
ಬ್ರಿಟಿಷ್ ಕಾಲೋನಿಯಿಂದ ಹೊರಬಂದು ಸ್ವತಂತ್ರ್ಯ ಭಾರತ ಕಟ್ಟಿಕೊಂಡ ಬಳಿಕ ಭಾರತ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿತು. ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಚಿತ್ರಣ ಬದಲಾಗಿದೆ. ಭಾರತ ಯಾರ ಮುಂದೆ ತಲೆಬಾಗುವ ಪರಿಸ್ಥಿತಿ ಭಾರತಕ್ಕಿಲ್ಲ.ಪ್ರಧಾನಿ ಮೋದಿ ದೇಶಭಕ್ತ. ದೇಶದ ಕುರಿತು ಅತೀವ ಕಾಳಜಿ ಹೊಂದಿರುವ ಕಾರಣ ಭಾರತದ ಎಲ್ಲಾ ದಿಕ್ಕಿನಲ್ಲೂ ಅಭಿವೃದ್ಧಿ ಕಾಣುತ್ತಿದೆ. ಪ್ರಧಾನಿ ಮೋದಿ ಕೃಷಿ ರಸಗೊಬ್ಬರಗಳುನ್ನು ಹೈಚ್ಚಿನ ಸಂಖ್ಯೆಯಲ್ಲಿ ಪೂರೈಸುವಂತೆ ಕೇಳಿಕೊಂಡಿದ್ದಾರೆ. ಮೋದಿ ಮನವಿಯಂತೆ ನಾವು 7ರಿಂದ 8 ಪಟ್ಟು ಹೆಚ್ಚಿನ ಕೃಷಿ ರಸಗೊಬ್ಬರಗಳನ್ನು ರಫ್ತು ಮಾಡಿದ್ದೇವೆ ಎಂದಿದ್ದಾರೆ. ಮೋದಿ ನಡೆ, ನಿರ್ಧಾರದಿಂದ ಭಾರತ ಇಂದು ಸ್ವಾವಲಂಬಿಯಾಗಿ ಬೆಳೆದು ನಿಂತಿದೆ. ಇದೇ ಕಾರಣಕ್ಕೆ ಭವಿಷ್ಯದಲ್ಲಿ ಎಲ್ಲಾ ದೇಶಗಳು ಭಾರತವನ್ನೇ ಆಶ್ರಯಿಸಲಿದೆ.ಎಂದು ಪ್ರಧಾನಿ ಮೋದಿಗೆ ಅಭಿನಂದನೆಗಳು ಎಂದು ಪುಟಿನ್ ಹೇಳಿದ್ದಾರೆ.