ಮಾತನಾಡಿದ ಆರ್‌ಜೆಡಿ ನೇತಾರ ಲಾಲು ಪ್ರಸಾದ್‌ಯಾದವ್, ‘ವಿಪಕ್ಷಗಳ ಇಂಡಿಯಾ ಕೂಟಕ್ಕೆ ಮೋದಿ ‘ಕ್ವಿಟ್‌ಇಂಡಿಯಾ’ ಎಂದು ಛೇಡಿಸಿದ್ದಾರೆ. ಆದರೆ ನಿಜವಾಗಿಯೂ ‘ಕ್ವಿಟ್’ ಬಗ್ಗೆ ಯೋಚನೆ ಮಾಡುತ್ತಿರುವವರು ಮೋದಿ. ಅದಕ್ಕೆಂದೇ ಅವರು ಅನೇಕ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಎಲ್ಲಿ ಒಳ್ಳೇ ಪಿಜ್ಜಾ, ಮೋಮೋ ಸಿಗುತ್ತೆ ಎಂದು ಹುಡುಕುತ್ತಿದ್ದಾರೆ’ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಇದೆ. ಹೀಗಾಗಿ ಅವರು ಚುನಾವಣೆ ನಂತರ ವಿದೇಶಕ್ಕೆ ಹೋಗಿ ನೆಲೆಸುವ ಸಾಧ್ಯತೆ ಇದೆ ಎಂದು ಆರ್‌ಜೆಡಿ ನೇತಾರ ಲಾಲು ಪ್ರಸಾದ್‌ಯಾದವ್‌ಚಟಾಕಿ ಹಾರಿಸಿದರು.