ಈ ವರ್ಷ ನವದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿ ಈಜಿಪ್ಟ್‌ಅಧ್ಯಕ್ಷ ಅಬ್ದೆಲ್‌ಫತ್ತಾಹ್‌ಅಲ್‌ಸಿಸಿ ಭಾರತದ ಆಹ್ವಾನದ ಮೇರೆಗೆ ಅತಿಥಿಯಾಗಿ ಆಗಮಿಸಲಿದ್ದಾರೆ. ಇತಿಹಾಸದ ಪುಟಗಳನ್ನು ತಿರುವಿ ನೋಡುವುದಾದರೆ, ಗಣರಾಜ್ಯೋತ್ಸವದ ಸಮಾರಂಭಗಳಿಗೆ ಭಾರತವು ಸಾಮಾನ್ಯವಾಗಿ ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಜಪಾನ್‌ದೇಶಗಳು ಇಲ್ಲವೆ ನೆರೆಹೊರೆಯ ದೇಶದ ಅಧ್ಯಕ್ಷರನ್ನು ಅತಿಥಿಯಾಗಿ ಆಹ್ವಾನ ಮಾಡುತ್ತಿತ್ತು. ಇದೇ ಮೊದಲ ಬಾರಿಗೆ ಈಜಿಪ್ಟ್‌ದೇಶದ ಅಧ್ಯಕ್ಷರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇಡೀ ಅರಬ್‌ರಾಷ್ಟ್ರಗಳಲ್ಲಿ ಈಜಿಪ್ಟ್‌ದೇಶದ ಜನಸಂಖ್ಯೆಯೇ ಅಧಿಕ. ಅಂದಾಜು 109.3 ಮಿಲಿಯನ್‌ಜನಸಂಖ್ಯೆ ಈಜಿಪ್ಟ್‌ನಲ್ಲಿದೆ. ಭಾರತದ ಪ್ರತಿ ಹೆಜ್ಜೆಗೂ ತಿವಿದು ಮಾತನಾಡುವ ಇಸ್ಲಾಮಿಕ್‌ರಾಷ್ಟ್ರಗಳ ಒಕ್ಕೂಟ ದಲ್ಲಿ ಈಜಿಪ್ಟ್‌ಅತೀದೊಡ್ಡ ರಾಷ್ಟ್ರವಾಗಿರುವುದು ಮಾತ್ರವಲ್ಲ ಭಯೋತ್ಪಾದನೆ ಹಾಗೂ ಉಗ್ರವಾದದ ವಿರುದ್ಧ ಓಐಸಿಯಲ್ಲಿ ದೊಡ್ಡ ದನಿಯಾಗಿದೆ. ಭಾರತ ಮತ್ತು ಈಜಿಪ್ಟ್ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 75 ವರ್ಷಗಳೂ ಆಗಿವೆ.