ನಾನು ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತನಾಡಿದೆ. ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು, ನನ್ನನ್ನು ಕಳಿಸಲು ಷಡ್ಯಂತ್ರ: ಸೋಮಶೇಖರ್‌

ಬಿಜೆಪಿಯ ಸ್ಥಳೀಯ ಮುಖಂಡರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಬಳಿಕ ಸೋಮಶೇಖರ್‌ಅವರೊಂದಿಗೆ ವಲಸೆ ಬಂದಿದ್ದ ಅವರ ಕಟ್ಟಾಬೆಂಬಲಿಗರ ಪೈಕಿ ಅನೇಕರು ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಇದೇ ವೇಳೆ ಸೋಮಶೇಖರ್‌ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಅವರೊಂದಿಗೆ ಆಪ್ತ ಮಾತುಕತೆ ನಡೆಸಿದರು. ಕ್ಷೇತ್ರದಲ್ಲಿ ಸಭೆಯನ್ನೂ ನಡೆಸಿದರು. ಈ ಎಲ್ಲ ಬೆಳವಣಿಗೆಗಳು ಸೋಮಶೇಖರ್‌ಅವರು ಮತ್ತೆ ಕಾಂಗ್ರೆಸ್‌ಗೆ ವಾಪಸಾಗುತ್ತಾರೆ ಎಂಬ ವದಂತಿಯನ್ನು ಕ್ರಮೇಣ ದಟ್ಟಗೊಳಿಸಿತು. ಈ ಹಿನ್ನೆಲೆಯಲ್ಲಿ ಅವರು ‘ ಬಿಜೆಪಿಯೊಂದಿಗಿನ 4 ವರ್ಷಗಳ ನಂಟು ಕವಲುದಾರಿಯಲ್ಲಿ ಬಂದು ನಿಂತಂತಿದೆ.ಚುನಾವಣೆಗೂ ಮೊದಲು ನಾನು ಕಾಂಗ್ರೆಸ್‌ಹೋಗುತ್ತೇನೆ ಎಂಬ ಸುದ್ದಿ ತೇಲಿಬಿಡಲಾಗಿತ್ತು. ಅದರ ನಡುವೆಯೇ ಚುನಾವಣೆ ಎದುರಿಸಿದೆ. ಪಕ್ಷದ ಶೇ.40ರಷ್ಟುಕಾರ್ಯಕರ್ತರು ನನ್ನನ್ನು ಸೋಲಿಸುವ ಪ್ರಯತ್ನ ಮಾಡಿದರು. ಆಗ ಆ ಬಗ್ಗೆ ನನ್ನ ಬಳಿ ಯಾವುದೇ ದಾಖಲೆ ಇರಲಿಲ್ಲ. ಆದರೂ, ನಾನು ಈ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೆ. ಆದರೆ ಸ್ಪಂದನೆ ಸಿಗಲಿಲ್ಲ. ಫಲಿತಾಂಶ ಬಂತು. ಗೆಲುವು ಸಾಧಿಸಿದೆ. ಬಳಿಕ ಎಲ್ಲವನ್ನೂ ಮರೆತಿದ್ದೆ. ಆದರೆ, ಏಕಾಏಕಿ ನನ್ನನ್ನು ಚುನಾವಣೆ ವೇಳೆ ವಿರೋಧ ಮಾಡಿದವರು ನನ್ನ ಫೋಟೋ ಬಳಸಿಕೊಂಡು ಕ್ಷೇತ್ರದಾದ್ಯಂತ ಹುಟ್ಟುಹಬ್ಬದ ಬ್ಯಾನರ್‌ಹಾಕಿದರು. ಆಗ ನಮ್ಮ ಕಾರ್ಯಕರ್ತರು ಇದನ್ನು ಪ್ರಶ್ನಿಸಿ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಕ್ಷೇತ್ರದ ಮಟ್ಟಿಗೆ ಪತ್ರಿಕಾಗೋಷ್ಠಿಯನ್ನೂ ನಡೆಸಿದರು. ಅದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕಪೀಠದ ಸಮಾರಂಭವೊಂದಕ್ಕೆ ಆಗಮಿಸಿದ್ದರು. ನಾನು ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತನಾಡಿದೆ. ಅಲ್ಲಿಂದ ನಾನು ಪಕ್ಷ ಬಿಟ್ಟು ಹೋಗುತ್ತೇನೆ ಎಂಬ ವ್ಯವಸ್ಥಿತ ಅಪಪ್ರಚಾರ ಆರಂಭವಾಯಿತು.

Leave a Reply

Your email address will not be published. Required fields are marked *