ನೂತನ ಶಾಸಕರ ತರಬೇತಿ ಕಾರ್ಯಕ್ರಮದಲ್ಲಿ ಮನದಾಳದ ಮಾತನ್ನು ಹಂಚಿಕೊಂಡ ಡಿಸಿಎಂ ಡಿಕೆ ಶಿವಕುಮಾರ್, ನಾನು ಜೈಲಿಗೆ ಹೋಗೋವಾಗ ದುಡ್ಡು ಹೊಡೆದು ಹೋದೆ ಎಂದರು. ನಾನು ಯಾರ ಜೊತೆ ಕೆಲಸ ಮಾಡಿದ್ದೆನೋ ಅವರೇ ಈ ಡೈಲಾಗ್ ಹೊಡೆದಿದ್ದರು. ಅದೆಲ್ಲಾ ಈಗ ಚರ್ಚೆ ಮಾಡೋಕೆ ಹೋಗಲ್ಲ. ಅವರು ಚೀಫ್ ಮಿನಿಸ್ಟರ್ ಆಗಿದ್ದವರು. ಎಂದು ಡಿಕೆಶಿ ಹೇಳಿದ್ದಾರೆ. ನೂತನ ಶಾಸಕರ ಮುಂದೆ ಆತ್ಮೀಯರ ಮಾತಿನ ಬಗ್ಗೆ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಅದರ ಬಗ್ಗೆ ಮಾತನಾಡಿದ್ದು ಯಾಕೆ? ಎಂಬ ಬಗ್ಗೆ ಇದೀಗ ಭಾರೀ ಚರ್ಚೆ ಉಂಟಾಗಿದೆ.