ವಿಶ್ವದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ದೈತ್ಯ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ನರೇಂದ್ರ ಮೋದಿಯವರ ಐತಿಹಾಸಿಕ ಯುಎಸ್‌ಪ್ರವಾಸದ ಮೊದಲ ದಿನ ಎಲಾನ್ ಮಸ್ಕ್ ಮತ್ತು ನರೇಂದ್ರ ಮೋದಿ ಭೇಟಿ ಮಾಡಿದರು.ಭೇಟಿಯ ನಂತರ ಮಾತನಾಡಿದ ಎಲಾನ್ ಮಸ್ಕ್, ನಾನು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ, ಅವರು ಭಾರತಕ್ಕಾಗಿ ಉತ್ತಮ ಕೆಲಸಗಳನ್ನು ಮಾಡಲು ಬಯಸುತ್ತಾರೆ. ನನ್ನನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ, ಮೋದಿಯವರ ಆಹ್ವಾನದ ಮೇರೆಗೆ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ಅದಕ್ಕಾಗಿ ನಾನು ಉತ್ಸುಕನಾಗಿ ಕಾಯುತ್ತಿದ್ದೇನೆ.ಮೋದಿಯವರು, ಹೊಸ ಕಂಪನಿಗಳನ್ನು ಆಹ್ವಾನಿಸಲು ಮತ್ತು ಬೆಂಬಲಿಸಲು ಬಯಸುತ್ತಾರೆ. ಭಾರತದಲ್ಲಿ ಹೂಡಿಕೆ ಮಾಡುವಂತೆ ಅವರು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಭಾರತ ಸೋಲಾರ್ ಪವರ್ ವಿಚಾರದಲ್ಲಿ ಹೂಡಿಕೆ ಮಾಡಲು ಅದ್ಭುತ ದೇಶವಾಗಿದೆ, ಅತಿ ಶೀಘ್ರದಲ್ಲೇ ಸ್ಟಾರ್ ಲಿಂಕ್ ಇಂಟರ್ನೆಟ್‌ಅನ್ನು ಭಾರತಕ್ಕೆ ತರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ಬಗ್ಗೆ ನರೇಂದ್ರ ಮೋದಿ ಉತ್ತಮ ಯೋಜನೆಗಳನ್ನು ಹೊಂದಿದ್ದಾರೆ ಎಂದು ಮಸ್ಕ್ ಹೇಳಿದರು.”ಭಾರತದ ಭವಿಷ್ಯದ ಬಗ್ಗೆ ನಂಬಲಾಗದಷ್ಟು ಉತ್ಸುಕನಾಗಿದ್ದೇನೆ. ಎಂದು ಹೇಳಿದರು. ಇದು ಪ್ರಧಾನಿ ಮೋದಿ ಜೊತೆಗಿನ ಅದ್ಭುತ ಭೇಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನಿಜವಾಗಿಯೂ ಭಾರತಕ್ಕೆ ಉತ್ತಮ ಕೆಲಸ ಮಾಡುವ ಗುರಿ ಹೊಂದಿದ್ದಾರೆ. ಹೊಸ ಉದ್ಯಮಗಳಿಗೆ ಬೆಂಬಲ ನೀಡುತ್ತಾರೆ, ಅದರಿಂದ ಭಾರತಕ್ಕೆ ಅನುಕೂಲವಾಗಬೇಕು ಎಂದು ಅವರು ಬಯಸುತ್ತಾರೆ ಎಂದು ಎಲಾನ್ ಮಸ್ಕ್ ಹೇಳಿದರು.ಅತಿ ಶೀಘ್ರದಲ್ಲೇ ಟೆಸ್ಲಾ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಮಸ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.