ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಸಂತೋಷ್‌ಆತ್ಮಹತ್ಯೆ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಎಲ್ಲರೂ ಆಪಾದನೆ ನಿರಾಧಾರ ಅಂದಿದ್ದರು. ಕ್ಲೀನ್ ಚಿಟ್ ಬಂದರೆ ಮತ್ತೆ ಮಂತ್ರಿ ಮಾಡುತ್ತೇವೆ ಅಂದಿದ್ದರು. ಆದರೆ ಕ್ಲೀನ್ ಚಿಟ್ ಸಿಕ್ಕಿ ನಾಲ್ಕು ತಿಂಗಳಾಯ್ತು. ಇದುವರೆಗೆ ಮಂತ್ರಿ ಮಾಡಲಿಲ್ಲ. ನಲವತ್ತು ವರ್ಷ ಬಿಜೆಪಿ ಕಟ್ಟಿದವನು ನಾನು. ಎಲ್ಲ ನಾಯಕರಿಗೆ ಪಕ್ಷದಿಂದ ಪ್ರತಿಫಲ ಸಿಕ್ಕಿದೆ. ನನಗೆ ಯಾಕೆ ಹೀಗೆ ಮಾಡ್ತಾರೆ ಪಕ್ಷದಿಂದ ಅಂತ ಗೊತ್ತಾಗ್ತಿಲ್ಲ. ಸಿಎಂ ಅವರು ಖಾಸಗಿ ಚಾನಲ್‍ನಲ್ಲಿ ಸಂದರ್ಶನ ಕೊಟ್ಟಿದ್ದಾಗ, ಅದರಲ್ಲಿ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಇಬ್ಬರಿಗೂ ಕ್ಲೀನ್ ಚಿಟ್ ಸಿಕ್ಕಿದೆ. ಇಬ್ಬರನ್ನೂ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ. ನಾನು ಸಿಎಂ ಅವರನ್ನು ನಂಬುತ್ತೇನೆ ಆದಷ್ಟು ಬೇಗ ನನ್ನನ್ನು ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಿ ಎಂದು ಮನವಿ ಮಾಡುತ್ತೇನೆ ಎಂದರು.