ಬೆಂಗಳೂರಿನ ಕಾಂಗ್ರೆಸ್ ಶಾಸಕರ ಸಭೆಯ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರು ಶಾಸಕರು ನಾಳೆ ಸಿಎಂನ ಭೇಟಿ ಮಾಡಲಿದ್ದಾರೆ. ಹಿಂದೆ ಆದ ತಾರತಮ್ಯ ಚರ್ಚೆ ಮಾಡ್ತೀವಿ. ಹಣಕಾಸು ವಿಚಾರದ ಬಗ್ಗೆ ಚರ್ಚೆಯಾಗಲಿದೆ. ಕ್ಷೇತ್ರದ ವಿಚಾರ ಚರ್ಚೆ ಮಾಡ್ತೀವಿ ಅಂತಾ ಹೇಳಿದ್ದಾರೆ. ಕಂಟ್ರ್ಯಾಕ್ಟರ್ಗಳು ಆಣೆ ಪ್ರಮಾಣಕ್ಕೆ ಬರಲಿ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾವ ಗುತ್ತಿಗೆದಾರನಿಗೂ ಉತ್ತರ ಕೊಡಲ್ಲ. ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ನನಗೂ ಪ್ರಜ್ಞೆ ಇದೆ, ರಾಜಕಾರಣ ಗೊತ್ತಿದೆ. ಯಾವ ಕಂಟ್ರ್ಯಾಕ್ಟರ್ಹಿಂದೆ ಯಾರಿದ್ದಾರೆ ನನಗೂ ಗೊತ್ತಿದೆ. ಯಾವ ಬ್ಲಾಕ್ಮೇಲ್ನನ್ನ ಮುಂದೆ ನಡೆಯಲ್ಲ. ಯಾವುದೇ ಒತ್ತಡ ಇದ್ದರೂ ತಡೆದುಕೊಳ್ಳಲು ರೆಡಿ. ಯಾರಿಗೋ ಬ್ಲಾಕ್ ಮೇಲ್ ಮಾಡುವಂತೆ ನನಗೆ ಮಾಡಲು ಬರಬೇಡಿ. ಬಿಜೆಪಿ ವಿರುದ್ಧ ನಾವು ಆರೋಪ ಮಾಡಿದ್ದು ಸತ್ಯ. ಲೆಟರ್ ಕೊಟ್ಟಿದ್ದು ಸತ್ಯ. ಅಶ್ವಥ್ ನಾರಾಯಣ್, ಬೊಮ್ಮಾಯಿ ಸೇರಿದಂತೆ ಎಲ್ಲರೂ ತನಿಖೆ ಮಾಡಿ ಅಂತಾ ಸದನದಲ್ಲಿ ಅಂದಿದ್ದು ಸತ್ಯ. ನಾವು ವಿಪಕ್ಷ ಇದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರ್ತಿರಲಿಲ್ವಾ. 25 ಸಾವಿರ ಕೋಟಿ ಬಿಲ್ಇದೆ. ಇರಿಗೇಷನ್ ಡಿಪಾರ್ಟ್ಮೆಂಟ್ ನಲ್ಲಿ ಇರೋದು 600 ಕೋಟಿ, ಯಾರಿಗೆ ಹಣ ಕೊಡಲು ಸಾಧ್ಯ.