ನಾರಾಯಣಸ್ವಾಮಿ ಪ್ರಕರಣ ದಾಖಲು ಮಾಡಿಲ್ಲ. ಅವರ ಕೈಯಿಂದ ಬಿಜೆಪಿ ಮತ್ತು ಆರ್ ಎಸ್‍ಎಸ್‌ನವರು ಮಾಡಿಸಿದ್ದಾರೆ: ಸಿದ್ದು

ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಜಾತಿ ನಿಂದನೆ ಪ್ರಕರಣ ದಾಖಲು ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ನನ್ನ ಮೇಲೆ ಛಲವಾದಿ ನಾರಾಯಣಸ್ವಾಮಿ ಪ್ರಕರಣ ದಾಖಲು ಮಾಡಿಲ್ಲ. ಅವರ ಕೈಯಿಂದ ಬಿಜೆಪಿ ಮತ್ತು ಆರ್ ಎಸ್‍ಎಸ್‌ನವರು ಮಾಡಿಸಿದ್ದಾರೆ. ನಾನು ಜಾತಿ ನಿಂದನೆ ಮಾಡಿಲ್ಲ. ಬಿಜೆಪಿಯವರು ಹಳೇ ಚಡ್ಡಿಗಳನ್ನು ಛಲವಾದಿ ನಾರಾಯಣಸ್ವಾಮಿ ಮೇಲೆ ಹೊರಿಸಿದ್ದಾರೆ ನಾನು ಲಾಯರ್ ನನಗೆ ಎಲ್ಲಾ ಗೊತ್ತು. ಹೀಗಾಗಿ ನಾನು ಅಸ್ಪೃಶ್ಯತೆ ಬಗ್ಗೆ ಧ್ವನಿ ಎತ್ತಿದ್ದೇನೆ ಅಷ್ಟೇ. ಅಗ್ನಿಪಥ್ ಯೋಜನೆ ಬಗ್ಗೆ ಮಾತನಾಡಿದ ಅವರು, ಇದಕ್ಕೆ ನಮ್ಮ ವಿರೋಧವಿದೆ. ನಾಲ್ಕು ವರ್ಷ ಬಳಿಕ ಆಯ್ಕೆ ಆದ ಅಭ್ಯರ್ಥಿಗಳ ಪರಿಸ್ಥಿತಿ ಏನೆಂಬ ಪ್ರಶ್ನೆ ಕಾಡುತ್ತಿದೆ. ಆದರೆ ಯಾರು ಹಿಂಸಾತ್ಮಕ ಪ್ರತಿಭಟನೆಗಳ ನಡೆಸಬಾರದು. ಶಾಂತಿಯುತ ಪ್ರತಿಭಟನೆ ಮಾಡಬೇಕು. ಆದೇಶ ವಾಪಸ್ ಪಡೆಯುವ ತನಕ ಪ್ರತಿಭಟನೆ ಮಾಡಬೇಕು ನಿಲ್ಲಿಸಬಾರದು ಎಂದು ಕರೆ ನೀಡಿದರು.

Leave a Reply

Your email address will not be published.