ನಾಲ್ಕು ವರ್ಷದ ಹಳೆಯ ಕಾಮಗಾರಿಗಳ ಎಸ್‌ಐಟಿ ತನಿಖೆ ಮಾಡುವುದು ಬೇಡ: ಕೆಂಪಣ್ಣ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಗುತ್ತಿಗೆದಾರರು ಟೆಂಡರ್‌ಗಳ ಮೂಲಕ ಗುತ್ತಿಗೆ ಪಡೆದಿದ್ದಾರೆ. ಹೀಗಾಗಿ ಎಸ್‌ಐಟಿ ತನಿಖೆ ನಡೆಸುವ ಅಗತ್ಯ ಇಲ್ಲ. ರಾಜ್ಯ ಸರ್ಕಾರದಿಂದ 25 ಸಾವಿರ ಕೋಟಿ ರೂ. ಬಾಕಿ ಇದ್ದು ಆಗಸ್ಟ್‌31ರವರೆಗೆ ಸಮಯ ನೀಡುತ್ತೇವೆ. ಈ ಡೆಡ್‌ಲೈನ್‌ಒಳಗೆ ಪಾವತಿಸದೇ ಇದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ಈಗ ನಾವು ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವೆ. ಸರ್ಕಾರ ಕೂಡಲೇ ದುಡ್ಡು ಬಿಡುಗಡೆ ಮಾಡಬೇಕು. ಬಿಜೆಪಿಯ ವಿರುದ್ಧ 40% ದಾಖಲೆ ನನ್ನ ಬಳಿ ಇದೆ. ನಾನು ಕೋರ್ಟ್‌ನಲ್ಲಿ ಎಲ್ಲವನ್ನೂ ನೀಡುತ್ತೇನೆ. ಕಾಂಗ್ರೆಸ್ ವಿರುದ್ಧದ 15% ಕಮಿಷನ್ ಆರೋಪಕ್ಕೆ ಬಿಬಿಎಂಪಿ ಗುತ್ತಿಗೆದಾರರರು ದಾಖಲೆ ಕೊಡಬೇಕು ಎಂದು ಕೆಂಪಣ್ಣ ಆಗ್ರಹಿಸಿದರು. ಇದೆಲ್ಲ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದು, ವಿರೋಧ ಪಕ್ಷದ ನಾಯಕ ಇದ್ದರೆ ಹೋಗಿ ಮಾತನಾಡಬಹುದಿತ್ತು. ಆದರೆ ವಿರೋಧ ಪಕ್ಷದ ನಾಯಕನೇ ಇಲ್ಲ. ಹೀಗಾಗಿ ನಾಯಕರನ್ನು ಭೇಟಿಯಾಗುವ ಅನಿವಾರ್ಯತೆ ಏನಿತ್ತು?

Leave a Reply

Your email address will not be published. Required fields are marked *