ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟ INDIA ಗುರುವಾರದಿಂದ 2 ದಿನ ಮುಂಬೈನಲ್ಲಿ ತನ್ನ ಮೂರನೇ ಸಭೆ ನಡೆಸಲಿದೆ. ಸಭೆಯಲ್ಲಿ ಕಾಂಗ್ರೆಸ್ ಸೇರಿ 26 ಪ್ರಾದೇಶಿಕ ಪಕ್ಷಗಳ ನಾಯಕರು ಭಾಗಿಯಾಗುತ್ತಿದ್ದು ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.ಸಭೆಯಲ್ಲಿ INDIA ಒಕ್ಕೂಟಕ್ಕೆ ಸಾಮಾನ್ಯ ಧ್ವಜ ಮತ್ತು ಚಿಹ್ನೆಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದೆ. ಬಿಡುಗಡೆ ವೇಳೆ ಯುಪಿಎ ಒಕ್ಕೂಟದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಉಪಸ್ಥಿತರಿದ್ದಾರೆ ಎನ್ನಲಾಗಿದೆ. ಅಶೋಕ ಚಕ್ರ ರಹಿತ ತ್ರಿವರ್ಣ ಧ್ವಜ ಬಹುತೇಕ ಒಕ್ಕೂಟದ ಧ್ವಜವಾಗಿರಲಿದ್ದು, ಚಿಹ್ನೆಯ ಬಗ್ಗೆ ಇನ್ನು ನಾಯಕರು ಸುಳಿವು ಬಿಟ್ಟುಕೊಟ್ಟಿಲ್ಲ.