ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು, ಚುನಾವಣೆ ಮುಗಿದ ಬಳಿಕ ಮೊದಲ ಸಲ ಸುದ್ದಿಗೋಷ್ಟಿ ಮಾಡ್ತಿದ್ದೇನೆ. ನಾನು ಕಾಂಗ್ರೆಸ್, ಬಿಜೆಪಿ ಬಗ್ಗೆ ಮಾತಾಡಲ್ಲ ಈಗಮುಂದಿನ ಜಿಲ್ಲಾ ಪಂಚಾಯಿತಿ,ತಾಲ್ಲೂಕು ಪಂಚಾಯತಿ, ನಗರ ಪಾಲಿಕೆಯ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಭೆ ಕರೆದಿದ್ದೇವೆ. ಕುಮಾರಸ್ವಾಮಿ ಹತ್ತು ತಿಂಗಳಿನಿಂದ ರಾಜ್ಯದ ಅಭ್ಯುದಯಕ್ಕೆ ಬೇಕಾದ ಅನೇಕ ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ. ಅದರಲ್ಲಿ ನೀರಿನ ಲಭ್ಯತೆ, ನೀರಿನ ಹಂಚಿಕೆ ಬಗ್ಗೆ ಕಾರ್ಯಕ್ರಮ ಮಾಡಿದ್ದಾರೆ. ರಾಜ್ಯದ ಜನ ನಮ್ಮ ಜೊತೆ ಇದ್ದಾರೆ. ನಾವು ಸುಮ್ಮನೆ ಕುಳಿತುಕೊಳ್ಳಲ್ಲ. ಯುವಕರು ತುಂಬಾ ಉತ್ಸಾಹ ತೋರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲೇ ಅವರ ಉತ್ಸಾಹ ನೋಡಿದ್ದೀರಿ. ನಾನು ಮನೆಯಲ್ಲಿ ಇದ್ದಾಗ ಅನೇಕರು ಭೇಟಿ ಮಾಡಿದ್ದಾರೆ. ಧೃತಿಗೆಡದೆ, ನಮ್ಮ ಜೊತೆ ಇರಿ,ನಾವು ಕೆಲಸ ಮಾಡ್ತೀವಿ ಅಂತಾ ಧೈರ್ಯದ ಮಾತಾಡಿದ್ದಾರೆ. ಚುನಾವಣೆಗೆ ಹೋಗುವ ಮುಂಚೆ ನಾವು ಭರವಸೆಗಳನ್ನು ಕೊಡುವ ಬಗ್ಗೆ, ಎಲ್ಲಾ ವರ್ಗಗಳಿಗೂ ಅನುಕೂಲ ಆಗುವ ಬಗ್ಗೆ ಪ್ರಣಾಳಿಕೆ ತಯಾರು ಮಾಡುವ ಬಗ್ಗೆ ಸಭೆಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತೇವೆ.. ಹೀಗಾಗಿ ಪಕ್ಷದಲ್ಲಿ ಸೋತವರು, ಗೆದ್ದವರು ನಿರಾಶರಾಗದೇ ಮುಂದಿನ ಲೋಕಸಭಾ ಚುನಾವಣೆಗೆ ಸಿದ್ದರಾಗುತ್ತೇವೆ. ಅದಕ್ಕಾಗಿ ಈಗಿನಿಂದಲೇ ಕಾರ್ಯಪ್ರವೃತ್ತರಾಗುತ್ತೇವೆ ಎನ್ನುವ ಮೂಲಕ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಸದ್ದು ಮಾಡಲು ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.