ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು, ಚುನಾವಣೆ ದಿನ ಬೆಳಗಿನ ಜಾವ ಕಾಂಗ್ರೆಸ್ ಅಭ್ಯರ್ಥಿ ಗಿಫ್ಟ್ ಕೂಪನ್ ಹಂಚಿದ್ದಾರೆ ಚುನಾವಣೆ ಮುಗಿದು ಎರಡು ದಿನಗಳ ಬಳಿಕ ಇದು ನನಗೆ ಸಿಕ್ಕಿದೆ. ನಮ್ಮ ಕಡೆಯವರು ಬಂದು ಈ ರೀತಿ ಕೂಪನ್ ಹಂಚಿದ್ದು ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ರಾಮನಗರದಲ್ಲಿ ನಿಖಿಲ್ ಅವರನ್ನು ಸೋಲಿಸಿದ್ದಾರೆ ಅಂತಾರಲ್ಲ ಅವರನ್ನು ಸೋಲಿಸಿದ್ದು ಇದೇ ಎಂದು ಕೂಪನ್‌ಗಳನ್ನು ತೋರಿಸಿದರು.ಇದೇ ಆ ಕೂಪನ್ ಗೆದ್ದಮೇಲೆ ಕೊಡ್ತೀವಿ ಎಂದು ಹೇಳಿದ್ದಾರೆ. ನ್ಯಾಯಯುತವಾಗಿ ಅವರು ನಮ್ಮನ್ನು ಸೋಲಿಸಿಲ್ಲ, 20-30 ಕೋಟಿ ರುಪಾಯಿ ಎಲ್ಲಿಂದ ತರ್ತೀರಾ ಇವರಿಗೆ ಕೊಡೋಕೆ, ಇದಕ್ಕೆಲ್ಲಾ ದುಡ್ಡು ಎಲ್ಲಿ ಬರುತ್ತೆ ಕಮಿಷನ್ ದುಡ್ಡು ಹೊಡೆದ್ರೆ ಅಲ್ವಾ ಶಾಸಕರಿಗೆ ಹಣ ಬರೋದು, ಯೋಜನೆಗಳ ಹೆಸರಿನಲ್ಲು ಹಣ ಲೂಟಿ ಮಾಡೋಕೆ ನೀವು ಆದೇಶ ಕೊಡಬೇಕಲ್ವಾ ಈಗ, 40 ಪರ್ಸೆಂಟ್ ಮಾಡ್ತೀರೊ 80 ಪರ್ಸೆಂಟ್ ಮಾಡ್ತಿರೊ? ನಿಮ್ಮ ರಾಜೀವ್ ಗಾಂಧಿಯವರೇ ಹೇಳಿದ್ರಲ್ಲಾ, ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೊಟ್ಟರೆ 85 ಪರ್ಸೆಂಟ್ ಹಣ ದುರ್ಬಳಕೆ ಆಗ್ತದೆ ಎಂದು ಹೇಳಿದ್ದರು. ಅದನ್ನು ನೀವು ಕಾರ್ಯರೂಪಕ್ಕೆ ತರ್ತೀರಾ ಸಿದ್ದರಾಮಯ್ಯನರವೇ ಎಂದು ಪ್ರಶ್ನೆ ಮಾಡಿದರು.ಈ ವಿಚಾರವನ್ನು ಇಲ್ಲಿಗೇ ಬಿಡಲ್ಲ ಕಾನೂನು ಹೋರಾಟ ಮಾಡುತ್ತೇವೆ.ಎಂದು ಕಿಡಿ ಕಾರಿದರು.