ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ನೀಡಿದ ಹೇಳಿಕೆ ಕಾರ್ಯಕರ್ತರನ್ನು ದಿಗ್ಬ್ರಮೆಗೆ ದೂಡಿದೆ. 2023ರ ಚುನಾವಣೆ ನಮ್ಮ ಪಾಲಿಗೆ ಇದು ಒಂದು ರೀತಿ ಕೊನೆಯ ಚುನಾವಣೆ”ಪ್ರತಿಯೊಬ್ಬರಲ್ಲೂ ನಾನು ಹೇಳುವುದು ಇಷ್ಟೇ, ದೇವೇಗೌಡ್ರು ನಮ್ಮ ಜೊತೆಯಲ್ಲಿ ಇನ್ನೂ ನೂರಾರು ವರ್ಷ ಬದುಕಿ ಬಾಳಬೇಕು. 2023ರ ಚುನಾವಣೆ ನಮ್ಮ ಪಾಲಿಗೆ ಇದು ಒಂದು ರೀತಿ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಕೂಡಲೇ ಸಾವರಿಸಿಕೊಂಡು, “ಇಲ್ಲಿಂದ ಹೊಸ ಅಧ್ಯಾಯ ಆರಂಭವಾಗಬೇಕು. ಜಾತ್ಯಾತೀತ ಜನತಾದಳ ಮುಂದಿನ 25ವರ್ಷ ರಾಜ್ಯಭಾರ ಮಾಡಬೇಕು”ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಯಾಕಾಗಿ, ನಿಖಿಲ್ ಇದು ಕೊನೆಯ ಚುನಾವಣೆ ಎನ್ನುವ ಮಾತನ್ನಾಡಿದರು ಎನ್ನುವ ಚರ್ಚೆ ಜೆಡಿಎಸ್ ವಲಯದಲ್ಲಿ ಆರಂಭವಾಗಿದೆ.