ನವದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ನಿಜವಾಗಿ ಕಾಂಗ್ರೆಸ್ಗೆ ನಿಯತ್ತಿದ್ದರೆ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮೊದಲು ಈ ಯೋಜನೆ ಜಾರಿ ಮಾಡಲಿ. ಈ ಭರವಸೆ ನೋಡಿದರೆ ಒಟ್ಟಾರೆ ಸುಳ್ಳು ಹೇಳಿ, ಮೋಸ ಮಾಡಿ ಅಧಿಕಾರ ಹಿಡಿಯುವ ವ್ಯಾಮೋಹಕ್ಕೆ ಕಾಂಗ್ರೆಸ್ ನಾಯಕರು ಬಂದಂತೆ ಕಾಣುತ್ತಿದೆ. ಸೋಮವಾರ ಬೆಂಗಳೂರಿಗೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ನಾ ನಾಯಕಿ ಎಂದು ಹೇಳಿಕೊಂಡಿದ್ದಾರೆ ಇದು ಹಾಸ್ಯಾಸ್ಪದ. ನಾಯಕತ್ವ ಜನರಿಂದ ಬರಬೇಕು, ನಮಗೆ ನಾವೇ ಹೇಳಿಕೊಳ್ಳುವಂತದಲ್ಲ. ಅವರು ಬರೀ ಗುಲಾಮರಿಗೆ ನಾಯಕರಾಗಬಹುದು ಜನರಿಗಲ್ಲ ಎಂದು ವಾಗ್ದಾಳಿ ನಡೆಸಿದರು.