ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಮಾತನಾಡಿದ ಕೆ.ಸಿ ವೇಣುಗೋಪಾಲ್, ನಿಮ್ಮಿಬ್ಬರ ನಡೆ ಮತ್ತು ನುಡಿ ಪಕ್ಷಕ್ಕೆ ಸವಾಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ರಾಷ್ಟ್ರಮಟ್ಟದಲ್ಲಿ ಪಕ್ಷದ ಅಸ್ತಿತ್ವ ಉಳಿಸುವ ಗೆಲುವಾಗಲಿದೆ. ಪಕ್ಷ ಇದ್ದರೆ ವ್ಯಕ್ತಿ, ಪಕ್ಷವೇ ಸೋತರೆ ಯಾರು ಏನು ಮಾಡಲು ಆಗಲ್ಲ. ನಿಮ್ಮಿಬ್ಬರ ಮಾತು, ಪಕ್ಷಕ್ಕೆ ಹಿನ್ನಡೆಯಾದರೆ ನೀವಿಬ್ಬರೇ ಕಾರಣ ಹೊರತು ಬೇರೆಯವರಲ್ಲ. ನಿಮ್ಮಿಬ್ಬರ ಮಾತು, ವಿಭಿನ್ನ ಹೇಳಿಕೆಗಳೇ ಪಕ್ಷಕ್ಕೆ ಮುಳುವಾಗಬಹುದು. ಎಚ್ಚರಿಕೆಯಿಂದ ಮಾತನಾಡಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ಗೆ ಖಡಕ್ ಸೂಚನೆ ನೀಡಿದ್ದಾರೆ.