ಜಾಗತೀಕರಣದ ಈ ಯುಗದಲ್ಲಿ, ಪಾಶ್ಚಿಮಾತ್ಯರು ಹ್ಯಾಂಬರ್ಗರ್ ಬದಲಿಗೆ ಪಾನಿ ಪುರಿ ತಿನ್ನಲು ಪ್ರಾರಂಭಿಸುತ್ತಾರೆಯೇ ಮತ್ತು ನ್ಯೂಯಾರ್ಕ್ ಬದಲಿಗೆ H&M ಟಿ-ಶರ್ಟ್‌ಗಳ ಮೇಲೆ ನವ ದೆಹಲಿ ಎಂದು ಪ್ರಿಂಟ್‌ಮಾಡಲಾಗುತ್ತದೆಯೇ ಎಂದು ವಿದೇಶಾಂಗ ಸಚಿವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್. ಜೈಶಂಕರ್, “ಒಂದು ಪದವಿದೆ, ನಿಮ್ಮ ಬಾಯಿಗೆ ತುಪ್ಪ – ಸಕ್ಕರೆ ಹಾಕಾ’ ಎಂದು ಹಿಂದಿಯಲ್ಲಿ ಹೇಳಿದ್ದಾರೆ. ಅಂದರೆ, ನೀವು ಹೇಳುತ್ತಿರುವುದು ನಿಜವಾಗಲಿ ಎಂದು ಭಾವಿಸುತ್ತೇನೆ ಎಂದಿದ್ದು, ಇದನ್ನು ಕೇಳಿದ ಸಭಿಕರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ ಮತ್ತು ಚಪ್ಪಾಳೆ ತಟ್ಟಿದ್ದಾರೆ.ಯುರೋಪ್‌ಒಕ್ಕೂಟದ ಇಂಡೋ-ಪೆಸಿಫಿಕ್ ಮಿನಿಸ್ಟ್ರಿಯಲ್ ಫೋರಮ್ ನಲ್ಲಿ ಭಾಗವಹಿಸಲು ಮೂರು ದಿನಗಳ ಸ್ವೀಡನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು ಭಾನುವಾರ ಸಂಜೆ ಸ್ವೀಡನ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು ಮತ್ತು ದ್ವಿಪಕ್ಷೀಯ ಸಂಬಂಧದ ಪ್ರಗತಿಯನ್ನು ಅವರಿಗೆ ತಿಳಿಸಿದರು. ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆಗಳು ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಅದು ಸೃಷ್ಟಿಸಿದ ಅವಕಾಶಗಳ ಕುರಿತು ಜೈಶಂಕರ್‌ಮಾತನಾಡಿದ್ದಾರೆ.