ಟ್ವಿಟ್ಟರ್‌ಅನ್ನು ಜಗತ್ತಿನ ನಂ. 1 ಶ್ರೀಮಂತ ವ್ಯಕ್ತಿ ಎಲೋನ್‌ಮಸ್ಕ್ ಖರೀದಿ ಮಾಡಿದಾಗಿನಿಂದ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಟ್ವಿಟ್ಟರ್‌ಸಂಸ್ಥೆಯ ಉದ್ಯೋಗಿಗಳ ಕಡಿತ, ಬ್ಲೂ ಟಿಕ್‌ಗೆ ಹಣ, ಟ್ವೀಟ್‌ಮಾಡಲು ಅಕ್ಷರಗಳ ಸಂಖ್ಯೆ ಹೆಚ್ಚಳ ಸೇರಿದಂತೆ ನಾನಾ ಬದಲಾವಣೆಗಳನ್ನು ಮಾಡುವ ಎಲೋನ್‌ಮಸ್ಕ್, ಈಗ ಮೈಕ್ರೋ-ಬ್ಲಾಗಿಂಗ್ ಸೈಟ್‌ಗೆ ಮತ್ತೊಂದು ನವೀಕರಣ ಮಾಡಿದ್ದಾರೆ. ಈ ಬಾರಿ ಅವರು ಟ್ವಿಟ್ಟರ್‌ನ ಐಕಾನಿಕ್‌ಎನಿಸಿಕೊಂಡಿದ್ದ ಲೋಗೋವನ್ನೇ ಬದಲಾಯಿಸಿದ್ದಾರೆ.ನೀಲಿ ಪುಟ್ಟ ಪಕ್ಷಿಯ ಲೋಗೋ ಬದಲು Dogecoin ಕ್ರಿಪ್ಟೋಕರೆನ್ಸಿಯ ಲೋಗೋ ನಾಯಿಯನ್ನು ಟ್ವಿಟ್ಟರ್‌ನ ಲೋಗೋವನ್ನಾಗಿ ಬದಲಾಯಿಸಿದ್ದಾರೆ. ಸದ್ಯ, ವೆಬ್‌ಆವೃತ್ತಿಯಲ್ಲಿ ಈ ಹೊಸ ಲೋಗೋ ಹೋಮ್ ಬಟನ್ ಆಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಮೊಬೈಲ್‌ಅಪ್ಲಿಕೇಷನ್‌ಗಳಲ್ಲಿ ಇದು ಬದಲಾಗಿಲ್ಲ. ಈ ಬದಲಾದ ಲೋಗೋ ನೋಡಿದ ಟ್ವಿಟ್ಟರ್‌ಬಳಕೆದಾರರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಅಲ್ಲದೆ, ಹಲವರು #TwitterLogo ಎಂಬ ಹ್ಯಾಶ್‌ಟ್ಯಾಗ್‌ಬಳಸಿಕೊಂಡು ಇದನ್ನು ಟ್ರೋಲ್‌ಮಾಡುತ್ತಿದ್ದಾರೆ. ಈ ಮಧ್ಯೆ, ಮಾರ್ಚ್ 26, 2022 ರ ಸ್ಕ್ರೀನ್‌ಶಾಟ್ ಅನ್ನು ಸಹ ಟ್ವಿಟ್ಟರ್‌ಸಿಇಒ ಎಲೋನ್‌ಮಸ್ಕ್‌ಹಂಚಿಕೊಂಡಿದ್ದು, ಅವರ ಮತ್ತು ಚೇರ್‌ಮನ್‌ಎಂಬ ಹೆಸರು ಹೊಂದಿರುವ ಖಾತೆಯ ನಡುವಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಚೇರ್‌ಮನ್‌ಎನ್ನುವವರು ಟ್ವಿಟ್ಟರ್‌ಅನ್ನು ಖರೀದಿಸಿ, ಬಳಿಕ ಪಕ್ಷ ಲೋಗೋವನ್ನು ಡಾಗ್‌ಲೋಗೋವನ್ನಾಗಿ ಬದಲಾಯಿಸುವಂತೆ ಕೇಳಿದ್ದಾರೆ