ನೂತನ ಸಂಸತ್ ಭವನದ ಸವಿ ನೆನಪಿಗಾಗಿ ಕೇಂದ್ರ ಸರ್ಕಾರ 75 ರೂಪಾಯಿ ವಿಶೇಷ ನಾಣ್ಯ ಬಿಡುಗಡೆ ಮಾಡುತ್ತಿದೆ!

ಸ್ವತಂತ್ರ ಭಾರತಕ್ಕೆ 75 ವರ್ಷದ ಸಂಭ್ರಮ. ಹೀಗಾಗಿ ಅಮೃತ ಕಾಲವಾಗಿ ಭಾರತ ಆಚರಿಸುತ್ತಿದೆ. ಇದೇ ಅಮೃತಕಾಲದಲ್ಲಿ ಭಾರತದ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಿಸಿಕೊಂಡಿರುವ ಸಂಸತ್ ಭವನದ ಹೊಸ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ. ಈ ವಿಶೇಷ ಸಂದರ್ಭ ಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ 75 ರೂಪಾಯಿ ನಾಣ್ಯ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಕೇಂದ್ರ ಹಣಕಾಸು ಇಲಾಖೆ ಈ ಕುರಿತು ಮಹತ್ವದ ಘೋಷಣೆ ಮಾಡಿದೆ. ನಾಣ್ಯ ವೃತ್ತಾಕಾರವಾಗಿಲಿದೆ. 44 ಮಿಲಿಮೀಟರ್ ಗಾತ್ರಹೊಂದಿರಲಿದೆ. 35 ಗ್ರಾಂ ತೂಕ ಹೊಂದಿರಲಿದೆ. ಇನ್ನು ಶೇಕಡಾ 50 ರಷ್ಟು ಬೆಳ್ಳಿ, ಶೇಕಡಾ 40 ರಷ್ಟು ತಾಮ್ರ, ಶೇಕಡಾ 5 ರಷ್ಟು ನಿಕೆಲ್ ಹಾಗೂ ಶೇಕಡಾ 5ರಷ್ಟು ಸತು ಮಿಶ್ರಣದಿಂದ ನಾಣ್ಯ ತಯಾರಿಸಲಾಗಿದೆ.75 ರೂಪಾಯಿ ವಿಷೇಷ ನಾಣ್ಯ ಸಿಂಹಗಳನ್ನು ಹೊಂದಿರುವ ಆಶೋಕಸ್ಧಂಬ, ಅದರ ಕೆಳಗೆ ಸತ್ಯಮೇವ ಜಯತೆ ವಾಕ್ಯವೂ ಇರಲಿದೆ. ಇನ್ನು ನಾಣ್ಯದ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಭಾರತ, ನಾಣ್ಯದ ಬಲಭಾಗದಲ್ಲಿ ಇಂಗ್ಲೀಷ್‌ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ. ಇನ್ನು ರೂಪಾಯಿ 75 ಎಂದು ಬರೆಯಲಾಗಿದೆ. ಇನ್ನು ನಾಣ್ಯದ ಹಿಂಭಾಗದಲ್ಲಿ ಸಂಸದ್ ಸಂಕುಲ್ ಎಂದು ಬರೆಯಲಾಗಿದೆ.ನಾಣ್ಯದ ಕೆಳಭಾಗದಲ್ಲಿ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಎಂದು ಬರೆಯಲಾಗಿದೆ.ಭಾರಿ ವಿವಾದ ನಡುವೆ ಪ್ರಧಾನಿ ನರೇಂದ್ರ ಮೋದಿ ಮೇ.28 ರಂದು ನೂತನ ಸಂಸತ್ ಭವನ ಉದ್ಘಾಟನೆ ಮಾಡಲಿದ್ದಾರೆ. ಹಲವು ವಿಪಕ್ಷಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದೆ. ಇದರ ನಡುವೆ 25 ರಾಜಕೀಯ ಪಕ್ಷಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.

Leave a Reply

Your email address will not be published. Required fields are marked *