ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ಪಕ್ಷದ ತಪ್ಪುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ದೇಶದ ತಂತ್ರಜ್ಞಾನದ ದೇಶದ ವಿಜ್ಞಾನದ ವಿರೋಧಿಗಳು ಎಂದು ಟೀಕೆ ಮಾಡಿದರು.
ಸಾಮಾನ್ಯವಾಗಿ ನಮ್ಮ ಪಕ್ಷದ ಮೇಲೆ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಲೇ ಇರುತ್ತವೆ. ದೇಶದ ಯಾವುದೇ ಕಾರ್ಯಕ್ರಮಗಳಾದರೂ ಅಲ್ಲಿ ನೆಹರು ಅವರ ಹೆಸರು ಹೇಳಲೇಬೇಕು ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತವೆ. ಅವರು ದೇಶದ ಮೊದಲ ಪ್ರಧಾನಿಗಳು, ಅವರ ಹೆಸರನ್ನು ನಾವು ಹೇಳುತ್ತೇವೆ. ಕೆಲವೊಮ್ಮೆ ನಮ್ಮಿಂದಲೂ ಅಚಾತುರ್ಯಗಳಾಗುತ್ತವೆ. ಅವರ ಹೆಸರು ಹೇಳದೇ ಬಿಟ್ಟಿರುತ್ತೇವೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಯಾವ ರೀತಿ ವರ್ತಿಸುತ್ತದೆ ಎನ್ನುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಅಗತ್ಯವಿದಲ್ಲಿ ಅವರ ಹೆಸರು ಹೇಳಿದ್ದೇವೆ. ವಿರೋಧ ಪಕ್ಷ ಅಧಿಕಾರದಲ್ಲಿದ್ದಾಗ ಕನಿಷ್ಠ 600 ಯೋಜನೆಗಳಿಗೆ ನೆಹರು ಹಾಗೂ ಗಾಂಧಿ ಹೆಸರು ನೀಡಿದೆ. ಪ್ರತಿ ಬಾರಿಯೂ ನೆಹರು ಹೆಸರು ಹೇಳಿಲ್ಲ ಎಂದಾದರೆ ಅವರು ಅದನ್ನು ದೊಡ್ಡ ತಪ್ಪು ಎನ್ನುವಂತೆ ಬಿಂಬಿಸುತ್ತಾರೆ.ನಾನು ಎಲ್ಲರಿಗೂ ಒಂದು ಮಾತು ಹೇಳಲು ಬಯಸುತ್ತೇನೆ. ಈ ದೇಶ ಯಾವುದೇ ಕುಟುಂಬದ ರಿಯಲ್‌ಎಸ್ಟೇಟ್‌ಆಸ್ತಿಯಲ್ಲ. ಇವರಿಗೆ ನಾನು ಒಂದೇ ಪ್ರಶ್ನೆ ಕೇಳಲು ಬಯಸುತ್ತೇನೆ. ನೆಹರು ಹೆಸರು ಹೇಳಿಲ್ಲ ಎಂದಾಗ ತಲೆ ಕೆಡಿಸಿಕೊಳ್ಳುವ ನೀವು ನೆಹರು ಅಷ್ಟು ಗ್ರೇಟ್‌ಎಂದಾದಲ್ಲಿ ಅವರು ಕುಟುಂಬದವರೇಕೆ ನೆಹರು ಸರ್‌ನೇಮ್‌ಇರಿಸಿಕೊಂಡಿಲ್ಲ? ನೆಹರೂ ಸರ್‌ನೇಮ್‌ಅನ್ನು ಹೊಂದಲು ಏಕೆ ನಾಚಿಕೆ ಪಟ್ಟುಕೊಳ್ಳುತ್ತಾರೆ ಅನ್ನೋದೆ ನನಗೆ ಅರ್ಥವಾಗಿಲ್ಲ ಎಂದು ಹೇಳುವ ಮೂಲಕ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.