ನೇಕಾರರು ಮತ್ತು ಕಾರ್ಮಿಕರಿಗೆ 5,000 ರು. ನೀಡುವ ಯೋಜನೆಗಿಂದು ಸಿಎಂ ಬೊಮ್ಮಾಯಿ ಚಾಲನೆ

ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್‌ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಮತ್ತು ಕಾರ್ಮಿಕರಿಗೆ 2022-23ನೇ ಸಾಲಿನ ನೇಕಾರ ಸಮ್ಮಾನ್‌ಯೋಜನೆಯಡಿ ಐದು ಸಾವಿರ ರು. ವಾರ್ಷಿಕ ಆರ್ಥಿಕ ನೆರವನ್ನು ಡಿಬಿಟಿ ಮೂಲಕ ಒದಗಿಸಲಾಗುವುದು. ಗಣತಿಯಲ್ಲಿ ಈವರೆಗೆ ನೋಂದಾಯಿತರಾದ 1,02,980 ನೇಕಾರರು/ಕಾರ್ಮಿಕರು ತಲಾ ಐದು ಸಾವಿರ ರು. ನೆರವನ್ನು ಪಡೆಯಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇಕಾರರಿಗೆ ಬಂಪರ್‌ಕೊಡುಗೆ ಘೋಷಣೆ ಮಾಡಿದ್ದರು. ಹೀಗಾಗಿ ಆರ್ಥಿಕ ನೆರವು ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಲಿದ್ದಾರೆ.

Leave a Reply

Your email address will not be published. Required fields are marked *