ನೇಪಾಳದಲ್ಲಿ ನಡೆದ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 68 ಪ್ರಯಾಣಿಕರು ನಾಲ್ವರು ಸಿಬ್ಬಂದಿ ಸೇರಿ 72 ಜನ ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷದಿಂದ ಹೀಗಾಗಿರಬಹುದು ಎಂಬ ಗುಮಾನಿ ಇದೆ. ಘಟನೆ ಸಂಬಂಧ ತನಿಖೆಗೆ ನೇಪಾಳ ಸರ್ಕಾರ 5 ಜನರ ತಂಡ ರಚಿಸಿದೆ. ಇದು ನೇಪಾಳ ಕಳೆದ 30 ವರ್ಷದಲ್ಲಿ ಕಂಡ ಅತಿ ಭೀಕರ ವಾಯುದುರಂತ ಎಂದು ಹೇಳಲಾಗಿದೆ. ಅಪಘಾತದ ಕೆಲವು ಸೆಕೆಂಡು ಮುನ್ನ ಮೃತ 5 ಭಾರತೀಯರ ಪೈಕಿ ಓರ್ವ ಪ್ರಯಾಣಿಕ ವಿಮಾನದಲ್ಲಿ ಫೇಸ್‌ಬುಕ್‌ಲೈವ್‌ಆರಂಭಿಸಿದ್ದರು. ಆಗ ವಿಮಾನ ಅಲ್ಲಾಡತೊಡಗಿದ ದೃಶ್ಯಗಳು ಲೈವ್‌ನಲ್ಲಿ ಗೋಚರಿಸಿವೆ.