ಆರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜೊತೆಗೆ ಸಂವಾದ ನಡೆಸಿ ಹಲವು ಸಲಹೆಗಳನ್ನು ನೀಡಿದರು. ದೆಹಲಿಯ ಈ ವೇಳೆ ಮಾತನಾಡಿದ ಮೋದಿ, ಒಂದೋ, ಎರಡೋ ಪರೀಕ್ಷೆಯಲ್ಲಿ ನಕಲು ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಕಲು ಮಾಡುತ್ತಾ ಮುಂದೆ ಹೋದರೂ ಮುಂದೆ ಜೀವನದಲ್ಲಿ ಸಿಕ್ಕಿಹಾಕಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತೆ ಯಾರಾದರೂ ಮೋಸ ಮಾಡಿ ನಿಮಗಿಂತ ಸ್ವಲ್ಪ ಹೆಚ್ಚು ಅಂಕ ಪಡೆದರೂ ಅದು ನಿಮಗೆ ಜೀವನದಲ್ಲಿ ಅಡ್ಡಿಯಾಗಲಾರದು ನಿಮ್ಮ ಆಂತರಿಕ ಶಕ್ತಿಯನ್ನು ನಂಬಿ. ತಾಯಿಯಿಂದ ಸಮಯ ನಿರ್ವಹಣೆ ಕಲಿಯಿರಿ, ತಾಯಿಯು ದಿನದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಾಳೆ ಪ್ರತಿ ಕೆಲಸವನ್ನು ತಾಯಿ ಸಮಯಕ್ಕೆ ಸರಿಯಾಗಿ ಮಾಡುತ್ತಾಳೆ ಹಾಗಯೇ ವಿದ್ಯಾರ್ಥಿಗಳು ಸಮಯದ ನಿರ್ವಹಣೆ ಮಾಡಬೇಕು. ಪೋಷಕರು ಮಕ್ಕಳಿಗೆ ಹೆಚ್ಚು ಒತ್ತಡ ಹಾಕಬಾರದು. ಪೋಷಕರು ಒತ್ತಡ ಹಾಕದಿದ್ದರೂ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆಯಲ್ಲಿ ಮುನ್ನುಗ್ಗಿ ಯಾವತ್ತು ಧೈರ್ಯ ಕಳೆದುಕೊಳ್ಳಬೇಡಿ. ಓದನ್ನು ಕಡೆಗಣಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.