ಪಾಂಡಿಚೇರಿ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ದಿನೇಶ್ ಗುಂಡೂರಾವ್ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ದಾಳಿ

ಕಾಂಗ್ರೆಸ್ ಉಸ್ತುವಾರಿ ಆಗಿರುವ ದಿನೇಶ್ ಗುಂಡೂರಾವ್ ಅವರು, ಪಾಂಡಿಚೇರಿ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಗೆ ಹೋಗಿದ್ದರು. ಮಾಜಿ ಸಚಿವರೊಬ್ಬರನ್ನ ಬೆಂಬಲಿಸುವ ಬಣ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಧರಣಿ ನಡೆಸುತ್ತಿತ್ತು. ಈ ವೇಳೆ ಸಭೆ ಮುಗಿಸಿ ಹೊರಬರುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ದಿನೇಶ್ ಗುಂಡೂರಾವ್ ಅವರನ್ನು ಸುತ್ತುವರಿದು ತಳ್ಳಾಡಿ ಗಲಾಟೆ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಉತ್ತರ ನೀಡುವಂತೆ ದಿನೇಶ್ ಗುಂಡೂರಾವ್‍ಗೆ ಕಾರ್ಯಕರ್ತರ ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಮಾಜಿ ಸಿಎಂ ನಾರಾಯಣಸ್ವಾಮಿ ಬೆಂಬಲಿಗರು ಕೂಡ ಜಮಾಯಿಸಿದ್ದರು. ನಂತರ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.

Leave a Reply

Your email address will not be published. Required fields are marked *