ಪ್ರಧಾನಿ ನರೇಂದ್ರ ಮೋದಿ ಯವರನ್ನು ಗಾಯಕ ಅನೂಪ್ ಜಲೋಟಾ ಅವರು ಶ್ಲಾಘಿಸಿದ್ದಾರೆ. ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಮಾತನಾಡಿದ ಗಾಯಕ ಅನೂಪ್ ಜಲೋಟಾ, ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕನನ್ನು ಬಯಸುತ್ತೇವೆ ಎಂದು ಪಾಕಿಸ್ತಾನ ದ ಜನ ಹೇಳುತ್ತಾರೆ. ಜನರು ಮೋದಿಯನ್ನು ಪ್ರೀತಿಸುತ್ತಾರೆ. ಒಟ್ಟಿನಲ್ಲಿ ಪಾಕಿಸ್ತಾನವೇ ಮೋದಿಯವರನ್ನು ಪ್ರೀತಿಸುತ್ತಿದೆ ಅಂತಾನೇ ಹೇಳಬಹುದು. ಮೋದಿಯಂತಹ ನಾಯಕ ನಮಗೆ ಬೇಕು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಇತ್ತ ಸಿಡ್ನಿಯ ಜನ ಕೂಡ ಮೋದಿಯವರು ಶಾಶ್ವತವಾಗಿ ಪ್ರಧಾನಿಯಾಗಿರುವಂತೆ ಬಯಸುತ್ತಾರೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಯವರನ್ನು ಗಾಯಕ ಅನೂಪ್ ಜಲೋಟಾ ಅವರು ಶ್ಲಾಘಿಸಿದ್ದಾರೆ.