ಪಾಕಿಸ್ತಾನ, ಚೀನಾ ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ `ಡೇಂಜರಸ್’ ವ್ಯಕ್ತಿಯೊಬ್ಬ ಭಾರತಕ್ಕೆ ಪ್ರವೇಶಿಸಿದ್ದು – NIA ಅಲರ್ಟ್

ಪಾಕಿಸ್ತಾನ, ಚೀನಾ ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ `ಡೇಂಜರಸ್’ ವ್ಯಕ್ತಿಯೊಬ್ಬ ಮುಂಬೈ ಪ್ರವೇಶಿಸಿದ್ದು, ನಿಗಾ ವಹಿಸುವಂತೆ ರಾಷ್ಟ್ರೀಯ ತನಿಖಾ ದಳ ಮುಂಬೈ ಪೊಲೀಸರಿಗೆ ಇ-ಮೇಲ್ ಸಂದೇಶ ರವಾನಿಸಿದೆ. ಈ ಡೇಂಜರಸ್ ವ್ಯಕ್ತಿ ಇಂದೋರ್ ಮೂಲದ ಸರ್ಫರಾಜ್ ಮೆಮನ್ ಈತ ಈಗಾಗಲೇ ಮುಂಬೈ ಪ್ರವೇಶ ಮಾಡಿದ್ದಾನೆ. ಉಗ್ರ ಕೃತ್ಯಗಳನ್ನೂ ಎಸಗುವ ಸಾಧ್ಯತೆಯಿದೆ ಎಂದು ಇ-ಮೇಲ್‌ನಲ್ಲಿ ತಿಳಿಸಿದೆ. ಜೊತೆಗೆ ಆತನ ಆಧಾರ್ ಮಾಹಿತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮೊದಲಾದ ದಾಖಲೆಗಳನ್ನ ಎನ್‌ಐಎ ಮುಂಬೈ ಪೊಲೀಸರೊಂದಿಗೆ ಹಂಚಿಕೊಂಡಿದೆ. ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದು, ಮಧ್ಯಪ್ರದೇಶದ ಇಂದೋರ್ ಪೊಲೀಸರಿಗೂ ಈ ಬಗೆಗಿನ ಮಾಹಿತಿ ರವಾನಿಸಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ.

Leave a Reply

Your email address will not be published. Required fields are marked *