ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿಶ್ವಕಪ್ ಪಂದ್ಯದ ವೇಳೆ ಪಾಕ್ ತಂಡ ಅಭಿಮಾನಿಗಳಿಂದ ಭಾರೀ ಬೆಂಬಲವನ್ನು ಪಡೆದುಕೊಂಡಿತು. ಆಟಗಾರರು ಈ ವೇಳೆ ತಾಯ್ನಾಡಿನಲ್ಲೇ ಆಡಿದಷ್ಟು ಸಂಭ್ರಮಿಸಿದ್ದಾರೆ. ಪ್ರೇಕ್ಷಕರ ಪ್ರೀತಿಯಿಂದ ನನಗೆ ರಾವಲ್ಪಿಂಡಿಯಲ್ಲಿಯೇ ಪಂದ್ಯವನ್ನು ಆಡುತ್ತಿರುವಂತೆ ಭಾಸವಾಯಿತು. ಇಡೀ ತಂಡಕ್ಕೂ ಈ ಪ್ರೀತಿ ಸಿಕ್ಕಿದೆ ಎಂದು ಪಾಕ್ ಆಟಗಾರ ರಿಜ್ವಾನ್ ಹೇಳಿದ್ದಾರೆ.