ಗುಜರಾತ್ ಚುನಾವಣೆಯ ಮತದಾನೋತ್ತರ ಸಮೀಕ್ಷೆ ವಿಚಾರ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ದೇಶದಲ್ಲಿ ಯಾವುದೇ ಚುನಾವಣೆ ನಡೆದ್ರೂ ಅದು ಬಿಜೆಪಿ ಗೆಲುವು. ಸಿದ್ದರಾಮಯ್ಯಗೆ ಬದಾಮಿ? ಕೋಲಾರ, ಚಾಮುಂಡೇಶ್ವರಿ ಏಕೆ ಬೇಡ? 224 ಕ್ಷೇತ್ರದಲ್ಲಿ ಈ ಮೂರು ಕ್ಷೇತ್ರ ಇಲ್ವಾ? ಏಕೆ ಹೊಸ-ಹೊಸ ಕ್ಷೇತ್ರ ಹುಡುಕಿಕೊಂಡು ಹೋಗ್ತಿದ್ದೀರಾ? ಕಾಂಗ್ರೆಸ್ ಪಕ್ಷದ ನಾಯಕರಾದ ನಿಮಗೆ ಯಾವ ಕ್ಷೇತ್ರ ಅಂತಾ ಸ್ಪಷ್ಟ ಇಲ್ಲ ಅಂದಮೇಲೆ ಬಹುಮತ ಹೇಗೆ ಬರುತ್ತೆ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ಸ್ಥಾನವೂ ನಿಮಗೆ ಸಿಗಲ್ಲ.ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ? ಪಾಪ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಕ್ಷೇತ್ರವೇ ಇಲ್ಲದಂತಾಗಿದೆ. ಆದ್ದರಿಂದ ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಪಾಪ ಯಾವ ಕ್ಷೇತ್ರ ಕೊಟ್ಟರೂ ಓಕೆ ಅಂತಾರೆ.