ಪಿಎಸ್‍ಐ ಮರುಪರೀಕ್ಷೆಗೆ ಹೈಕೋರ್ಟ್ ತಡೆ ನೀಡಿದ್ದು, ಮುಂದಿನ ವಿಚಾರಣೆಯ ತನಕ ಮರುಪರೀಕ್ಷೆ ದಿನಾಂಕ ಪ್ರಕಟಿಸದಿರಲು ಸೂಚನೆ ಕೊಟ್ಟಿದೆ. ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪಿಎಸ್‍ಐ ಕೇಸ್‍ನಲ್ಲಿ ಆರೋಪಿತ ಎಡಿಜಿಪಿ ಅಮೃತ್ ಪೌಲ್ ವಿರುದ್ಧ 1,406 ಪುಟಗಳ ಹೆಚ್ಚುವರಿ ಚಾರ್ಟ್‍ಶೀಟ್ ಅನ್ನು ಸಿಬಿಐ ಸಲ್ಲಿಸಿದೆ.