ಉಡುಪಿಯಿಂದ ಆರಂಭಗೊಂಡ ಹಿಜಾಬ್ ವಿವಾದ, ಕರ್ನಾಟಕ, ಭಾರತ ಹಾಗೂ ವಿದೇಶಗಳಲ್ಲೂ ಭಾರಿ ಸದ್ದು ಮಾಡಿತ್ತು. ಇದೀಗ ಹಿಜಾಬ್ ಹೋರಾಟ ಪಾಕಿಸ್ತಾನ ಆಕ್ರಮಿ ಕಾಶ್ಮೀರದಲ್ಲಿ ಆರಂಭಗೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಸ್ಥಳೀಯ ಆಡಳಿತ ಮಹತ್ವದ ಆದೇಶ ನೀಡಿದೆ. ವಿದ್ಯಾರ್ಥಿನಿಯರು, ಶಿಕ್ಷಕಿಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು.ಇಷ್ಟೇ ಅಲ್ಲ ಹಿಜಾಬ್ ನಿಯಮ ಉಲ್ಲಂಘಿಸಿದರೆ ಶಾಲಾ ಆಡಳಿ ಮಂಡಳಿ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಆಡಳಿತ ಸುತ್ತೋಲೆಯಲ್ಲಿ ಹೇಳಿದೆ. ಹಲವು ವಿದ್ಯಾರ್ಥಿನಿಯರು ಸ್ಥಳೀಯ ಮಾಧ್ಯಮಗಳು ಹಿಜಾಬ್ ವಿರೋಧಿಸಿದ್ದಾರೆ. ಇದು ತಾಲಿಬಾನ್ ಆಡಳಿತ ಎಂದು ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿದೆ. ಹಿಜಾಬ್ ಕಡ್ಡಾಯ ಉಚಿತವಲ್ಲ, ವಿದ್ಯಾರ್ಥಿನಿಯರನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಸೂಚನೆ ನೀಡಿದೆ.