ಬುಧವಾರ ಬೆಳಗಿನ ಜಾವ ರಷ್ಯಾ ಅಧ್ಯಕ್ಷ ಪುಟಿನ್ ಸರ್ಕಾರಿ ನಿವಾಸ ಕ್ರೆಮ್ಲಿನ್ ಮನೆಯ ಮೇಲೆ ದಿಢೀರ್ 2 ಡ್ರೋನ್‌ಗಳು ನುಗ್ಗಿ ಬಂದಿದ್ದವು. ಅಲ್ಲದೆ ಕ್ರೆಮ್ಲಿನ್ ನಿವಾಸದ ಮೇಲೆ ಬಾಂಬ್ ದಾಳಿ ನಡೆಸಿದ್ದವು. ತಕ್ಷಣ ಎಚ್ಚೆತ್ತಿದ್ದ ರಷ್ಯಾ ಸೇನೆ ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿತ್ತು. ಈ ಘಟನೆ ನಡೆದು ಕೆಲವೇ ಗಂಟೆಗಳು ಉರುಳುವುದರ ಒಳಗಾಗಿ, ಉಕ್ರೇನ್‌ನಲ್ಲಿ ಭೀಕರ ದಾಳಿ ನಡೆದಿದೆ. ಉಕ್ರೇನ್ ವಿರುದ್ಧ ರಷ್ಯಾ ತೀವ್ರ ಸ್ವರೂಪದ ಶೆಲ್ ದಾಳಿ ನಡೆಸಿದೆ. ದಾಳಿಯಲ್ಲಿ ಒಟ್ಟು 16 ನಾಗರಿಕರು ಮೃತಪಟ್ಟು, 22ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ರಷ್ಯಾ ಇನ್ನಷ್ಟು ಭೀಕರ ದಾಳಿ ನಡೆಸುವ ಭಯ ಕಾಡುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಶುರುವಾಗಿ 1 ವರ್ಷ ಕಳೆದಿದ್ದು, ಈಗಲೂ ಪರಿಸ್ಥಿತಿ ಸುಧಾರಿಸುತ್ತಿಲ್ಲ.