ಸ್ಫೀಕರ್‌ಖಾದರ್‌ಅವರಿಗೆ ಕೃಷಿ ಇಲಾಖೆಯ ವರ್ಗಾವಣೆಗೆ ನಿಗದಿ ಮಾಡಿದ ದರಪಟ್ಟಿ ಮತ್ತು ಪೆನ್‌ಡ್ರೈವ್‌ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು, ಅದು ಸಾಮಾನ್ಯ ಪೆನ್‍ಡ್ರೈವ್ ಅಲ್ಲ. ಈ ಪೆನ್‍ಡ್ರೈವ್ ರಿಲೀಸ್‍ಗೆ ನನಗೆ ಆತುರ ಇಲ್ಲ. ಪೆನ್‍ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್‌ನವರೇ ತಡೆಯುತ್ತಿದ್ದಾರೆ.ಇನ್ನೂ ತುಂಬಾ ವಿಚಾರ ಸಿಗಲಿದೆ. ಈಗಲೇ ಆತುರಪಡಬೇಡಿ. ಕಾಂಗ್ರೆಸ್‍ನಲ್ಲಿ ವಿಕೆಟ್ ಬೀಳಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಇದು ಸಾಮಾನ್ಯ ಪೆನ್‍ಡ್ರೈವ್ ಅಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ಒಳಜಗಳಕ್ಕೆ ಬೆಂಕಿ ಹಚ್ಚಿದ್ದಾರೆ. ನಾನು ಎಲ್ಲೂ ಕದ್ದು ಓಡಿ ಹೋಗುವುದಿಲ್ಲ. ವಾಸ್ತವಾಂಶವನ್ನು ಸದನದ ಮುಂದೆ ಇಟ್ಟಿದ್ದೇನೆ. ಭ್ರಷ್ಟಾಚಾರ ನಿಲ್ಲಿಸುವ ಧೈರ್ಯವಿದ್ದರೆ ಕ್ರಮ ಕೈಗೊಳ್ಳಲಿ. ನಾನು ಒಕ್ಕಲಿಗ ಸಮಾಜದಲ್ಲಿ ಯಾರನ್ನೂ ಬೆಳೆಯಲು ಅಡ್ಡಿ ಮಾಡಿಲ್ಲ. ಭ್ರಷ್ಟಾಚಾರದ ದಾಖಲೆ ಇಟ್ಟಿದ್ದಕ್ಕೆ ಜಾತಿ ಬಣ್ಣ ಕಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಯಾವುದಾದರೂ ಜಾತಿ ಇದ್ಯಾ ಎಂದು ಪ್ರಶ್ನಿಸುವ ಮೂಲಕ ಚಲುವರಾಯಸ್ವಾಮಿಗೆ ಟಾಂಗ್‌ನೀಡಿದರು.