ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ ಕಲ್ಪನೆಯನ್ನು ಪ್ರಸ್ತಾಪಿಸಿ ಸಲಹೆ ನೀಡಿದ ಮೋದಿ

ಹರ್ಯಾಣದ ಸೂರಜ್‌ಕುಂಡ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳ ಗೃಹ ಸಚಿವರ ಜೊತೆ ಎರಡು ದಿನ ಚಿಂತನ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರ ಆರಂಭಗೊಂಡಿದ್ದು ಇಂದು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಒಂದು ದೇಶ ಒಂದು ಸಮವಸ್ತ್ರ ಕಲ್ಪನೆಯನ್ನು ಪ್ರಸ್ತಾಪಿಸಿದ ಮೋದಿ ಇದು ಕೇವಲ ಸಲಹೆಯಾಗಿದೆ. ಇದನ್ನು ನಾನು ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ. ಒಂದು ವೇಳೆ ಇದು ಜಾರಿಯಾದರೆ ಪೊಲೀಸರ ಗುರುತು ಒಂದೇ ಆಗಿರುತ್ತದೆ. ದೇಶಾದ್ಯಂತ ಪೊಲೀಸರು ಒಂದೇ ರೀತಿ ಕಾಣುತ್ತಾರೆ. 5, 50, 100 ವರ್ಷಗಳಲ್ಲಿ ಇದು ಆಗಬಹುದು. ಈ ನಿಟ್ಟಿನಲ್ಲಿ ಸ್ವಲ್ಪ ಯೋಚಿಸಿ ಎಂದು ರಾಜ್ಯಗಳಿಗೆ ಸಲಹೆ ನೀಡಿದರು. ಅಪರಾಧ ಮತ್ತು ಅಪರಾಧಿಗಳನ್ನು ನಿಯಂತ್ರಿಸಲು ರಾಜ್ಯಗಳು ಪರಸ್ಪರ ಸಹಕಾರ ನೀಡಬೇಕು ಎಂದು ಮೋದಿ ಹೇಳಿದರು.

Leave a Reply

Your email address will not be published. Required fields are marked *