ಪೋರ್ನ್ ಸ್ಟಾರ್‌ಗೆ ಹಣ ನೀಡಿದ ಪ್ರಕರಣ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎದುರಾಯ್ತು ಬಂಧನದ ಭೀತಿ

ತನ್ನೊಂದಿಗಿನ ಲೈಂಗಿಕ ಸಂಬಂಧವನ್ನು ಬಹಿರಂಗಗೊಳಿಸದೇ ಇರಲು ಡೊನಾಲ್ಡ್ ಟ್ರಂಪ್ ತನಗೆ ಹಣ ನೀಡಿದ್ದಾರೆ ಎಂದು ತನಿಖೆಯ ವೇಳೆ ಸ್ಟಾರ್ಮಿ ಡೇನಿಯಲ್ಸ್‌ಒಪ್ಪಿಕೊಂಡಿದ್ದಾರೆ. ಹೀಗಾಗಿ ತೀರ್ಪುಗಾರರು ಸ್ಟಾರ್ಮಿ ಡೇನಿಯಲ್ಸ್‌ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ. ಅಂದರೆ ಈ ಪ್ರಕರಣದಲ್ಲಿ ಅವಳು ಈಗ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.
ಡೊನಾಲ್ಡ್ ಟ್ರಂಪ್ ಅವರು 2016 ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಪೋರ್ನ್ ಸ್ಟಾರ್‌ಗಳಿಗೆ ಹಣ ಪಾವತಿಸಿದ್ದಾರೆ ಎಂಬ ಆರೋಪವಿದೆ. ವಾಸ್ತವವಾಗಿ ಟ್ರಂಪ್ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಚುನಾವಣಾ ಪ್ರಚಾರದ ಸಮಯದಲ್ಲಿ ಇದು ಹೊರಬರಲು ಅವರು ಬಯಸಲಿಲ್ಲ. ಅದಕ್ಕಾಗಿಯೇ ಅವರು ಪೋರ್ನ್ ಸ್ಟಾರ್ಗೆ ಹಣವನ್ನು ಪಾವತಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ವಿಧಿಸಲಾಗಿದೆ. ಟ್ರಂಪ್ ಅವರ ವಿರುದ್ಧದ ಆರೋಪಗಳೇನು ಎಂಬುದನ್ನು ಇನ್ನೂ ತಿಳಿಸಿಲ್ಲ ಎಂದು ಟ್ರಂಪ್ ಅವರ ಕಾನೂನು ತಂಡ ಕೂಡ ಹೇಳಿದೆ. ಅಲ್ಲದೆ ಮುಂದಿನ ವಾರದ ವೇಳೆಗೆ ಡೊನಾಲ್ಡ್ ಟ್ರಂಪ್ ಶರಣಾಗಬಹುದು ಎಂದು ಟ್ರಂಪ್ ಅವರ ಕಾನೂನು ತಂಡ ಹೇಳಿದೆ.

Leave a Reply

Your email address will not be published. Required fields are marked *