ಪೋಷಕರೇ ಎಚ್ಚರ- ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಆಡಿನೋ ವೈರಸ್..!

ಬೇಸಿಗೆ ಬಂತು ಅಂದ್ರೆ ಸಾಕು ನೆತ್ತಿಸುಡುವ ಬಿಸಿಲು, ಈ ಮಧ್ಯೆ ಈಗ ಸೀಸನಲ್ ಕಾಯಿಲೆಗಳು ಕೊಂಚ ಹೆಚ್ಚು. ಅದರಲ್ಲೂ ಈ ಮಧ್ಯೆ ಮಕ್ಕಳಲ್ಲಿ ಈಗ ಆಡಿನೋ ವೈರಸ್ ಪತ್ತೆಯಾಗಿದೆ. ಪೋಷಕರು ಹೆಚ್ಚು ಕೇರ್ ಫುಲ್ ಆಗಿರಬೇಕು. ಒಬ್ಬರಿಂದ ಒಬ್ಬರಿಗೆ ಹಬ್ಬುವ ಈ ಆಡಿನೋ ವೈರಸ್ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸದ್ಯ ರಾಜ್ಯದಲ್ಲಿ 69 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 13 ಕೇಸ್ ದಾಖಲಾಗಿದೆ. ಹೀಗಾಗಿ ಜ್ವರ, ಕೆಮ್ಮು ಹೆಚ್ಚು ದಿನ ಭಾದಿಸಿದ್ರೆ ವೈದ್ಯರನ್ನು ಭೇಟಿಯಾಗುವಂತೆ ಮಕ್ಕಳ ತಜ್ಞರು ಸಲಹೆ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *