ಅದಾನಿ ಗ್ರೂಪ್‌ಗೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ ಎನ್ನುವ ವಿಚಾರದ ಬಗ್ಗೆ ಅಮಿತ್‌ಶಾ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರವಾಗಲಿ ಬಿಜೆಪಿಯಾಗಲಿ ಅದಾನಿ ಗ್ರೂಪ್‌ವಿಚಾರದಲ್ಲಿ ಯಾವ ಸಂಗತಿಯನ್ನು ಬಚ್ಚಿಡುತ್ತಿಲ್ಲ. ಈ ವಿಚಾರದಲ್ಲಿ ಹೆದರುವಂಥದ್ದು ಕೂಡ ಏನೂ ಇಲ್ಲ. ಕಾಂಗ್ರೆಸ್‌ನೇತೃತ್ವದ ವಿರೋಧ ಪಕ್ಷಗಳಿಗೆ ಸದನದಲ್ಲಿ ಗಲಾಟೆ, ಗದ್ದಲ ಎಬ್ಬಿಸೋದು ಬಿಟ್ಟು ಬೇರೇನೂ ಬರೋದಿಲ್ಲ. ಹಾಗೇನಾದರೂ ಸರ್ಕಾರವಾಗಲಿ, ಅದಾನಿ ಗ್ರೂಪ್‌ಆಗಲಿ, ಇಲ್ಲ ಸರ್ಕಾರವೇ ಸಹಾಯ ಮಾಡುತ್ತಿದೆ ಎಂದಾಗಲು ಪ್ರತಿಪಕ್ಷಗಳ ಬಳಿ ಸಾಕ್ಷ್ಯಗಳಿದ್ದರೆ ಅವರು ನೇರವಾಗಿ ಕೋರ್ಟ್‌ಗೆ ಹೋಗಬಹುದಲ್ಲ ಅದಾನಿ ಗ್ರೂಪ್‌ನ ವಿಚಾರದಲ್ಲಿ ಸರ್ಕಾರದ ಬಳಿ ಮುಚ್ಚಿಡುವಂಥದ್ದು ಏನೂ ಇಲ್ಲ. ಎಂದು ಹೇಳಿದರು.ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಕ್ಯಾಬಿನೆಟ್‌ಸಚಿವನಾಗಿ ಈ ಬಗ್ಗೆ ಹೆಚ್ಚಿನ ಮಾತನಾಡುವುದು ಸರಿ ಎನಿಸುವುದಿಲ್ಲ ಎಂದರು.